

ಹೈದರಾಬಾದ್: ಪತ್ನಿ ಮತ್ತು ಹೆಣ್ಣುಮಕ್ಕಳನ್ನು ಸದಾ ಹಿಂಸಿಸುತ್ತಿದ್ದ ವ್ಯಕ್ತಿ ಪೊಲೀಸರಿಂದ ಬಂಧಿತನಾಗಿದ್ದಾನೆ. ಅವನು ಅರೆಸ್ಟ್ ಆಗಲು ಕಾರಣ ಪುತ್ರಿಯರು...!
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಈ ವ್ಯಕ್ತಿ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದ. ಈತ ಪ್ರತಿದಿನ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಹೊಡೆಯುತ್ತಿದ್ದ..ಹಿಂಸೆ ನೀಡುತ್ತಿದ್ದ. ಅಷ್ಟೇ ಅಲ್ಲ ಮಕ್ಕಳ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ನೋವನ್ನು ಸಹಿಸಿ ಸಾಕಾದ ಪುತ್ರಿಯರು ಒಂದು ದಿನ ತಂದೆ ತಮ್ಮ ತಾಯಿಗೆ ಡಂಬ್ಬಲ್ಸ್ನಿಂದ ಥಳಿಸುತ್ತಿರುವ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಪ್ಪನ ಕಿರುಕುಳ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ಅಮ್ಮ ಹಾಗೂ ನಮಗೆ ಹೊಡೆಯುತ್ತಿದ್ದ. ಲೈಂಗಿಕ ಕಿರುಕುಳ ನೀಡುತ್ತಿದ್ದ. ನಾವು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಅವರು ರಾಜಿಯಾಗುವಂತೆ ಹೇಳುತ್ತಿದ್ದರು. ಅವನನ್ನು ಕ್ಷಮಿಸಿ, ಒಟ್ಟಿಗೆ ಬದುಕಿ ಎನ್ನುತ್ತಿದ್ದರು ಎಂದು ಬಂಧಿತ ವ್ಯಕ್ತಿಯ ಓರ್ವ ಪುತ್ರಿ ತಿಳಿಸಿದ್ದಾಳೆ. ಇದನ್ನೂ ಓದಿ: ಗಾಲ್ವಾನ್ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!
ನಾವೂ ಸಹಿಸುತ್ತ ಬಂದೆವು. ಆದರೆ ಒಂದು ದಿನ ಆತ ಬಂದು ಅಮ್ಮಂಗೆ ಡಂಬ್ಬಲ್ಸ್ನಿಂದ ಹೊಡೆದ. ಆಗ ನಾವೂ ಅವನೊಂದಿಗೆ ವಾದಕ್ಕೆ ನಿಂತೆವು. ನಮ್ಮೆದುರೇ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದ. ನಮ್ಮ ಸ್ನೇಹಿತೆಯರು ಯಾರಾದರೂ ಮನೆಗೆ ಬಂದರೆ ಅವರ ಬಗ್ಗೆಯೂ ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದ. ಇದನ್ನೆಲ್ಲ ನೋಡಿ ಸಾಕಾಗಿತ್ತು. ಹಾಗಾಗಿ ವಿಡಿಯೋ ಮಾಡಿ ವೈರಲ್ ಮಾಡಿದ್ದೇವೆ. ಪೊಲೀಸರಿಗೂ ಕೊಟ್ಟಿದ್ದೆವು. ಅದರ ಅನ್ವಯ ಆತನನ್ನು ಬಂಧಿಸಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ. ಇದನ್ನೂ ಓದಿ: ಸಂಜನಾ ಅರೆಸ್ಟ್ ಆಗುವ ಮುನ್ನ ಕಾಲ್ ಮಾಡಿದ್ದು ಈ ವ್ಯಕ್ತಿಗೆ…; ಮತ್ತಷ್ಟು ಅನುಮಾನ ಹುಟ್ಟಿಸಿದ ನಟಿ
ಸೆಪ್ಟೆಂಬರ್ 5ರಂದು ದೂರು ಕೊಡಲಾಗಿತ್ತು. ಆದರೆ ಅಂದಿನಿಂದಲೇ ನಾಪತ್ತೆಯಾಗಿದ್ದ ಈತನನ್ನು ಸೆಪ್ಟೆಂಬರ್ 11ರಂದು ಬಂಧಿಸಿದ್ದಾರೆ. ವಿಡಿಯೋವನ್ನೇ ಸಾಕ್ಷಿ ಎಂದು ಪರಿಗಣಿಸಿದ್ದಾರೆ. ಡಂಬ್ಬಲ್ಸ್ನಿಂದ ಹೊಡೆದ ಪರಿಣಾಮ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗಿದೆ. (ಏಜೆನ್ಸೀಸ್)