ವಿಚ್ಛೇದನ ನೀಡುವಂತೆ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅತ್ತೆಯ ಪ್ರಾಣವನ್ನೇ ತೆಗೆದ ಅಳಿಯ

crime
Published on

ವಿಜಯವಾಡ: ವಿಚ್ಛೇದನ ನೀಡುವಂತೆ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅತ್ತೆಯನ್ನು ಅಳಿಯನೊಬ್ಬ ಸಾರ್ವಜನಿಕವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ನಾಗಮಣಿ(47) ಎಂದು ಗುರುತಿಸಲಾಗಿದ್ದು, ರಾಜೇಶ್(37) ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈಗಾಗಲೇ ರಾಜೇಶ್​ ಹಾಗೂ ಆತನ ಪತ್ನಿಯ ವಿಚ್ಛೇದನದ ಅರ್ಜಿಯು ನ್ಯಾಯಾಲಯದ ಮುಂದೆ ಬಾಕಿ ಇದೆ. ಆದರೆ ಪತ್ನಿಯಿಂದ ದೂರವಾಗಲು ಆಕೆಯ ಕುಟುಂಬಸ್ಥರೇ ಕಾರಣವೆಂದು ಆತ ಭಾವಿಸಿದ್ದ.

ಇದನ್ನೂ ಓದಿ: ಹಿಜಾಬ್​ಗೆ ಆಕ್ಷೇಪ: ಪ್ರಾಂಶುಪಾಲರು ಸೇರಿ ಮೂವರು ಶಿಕ್ಷಕರ ವಿರುದ್ಧ ದೂರು ದಾಖಲು

ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಚನುಮೋಲು ವೆಂಕಟರಾವ್ ಮೇಲ್ಸೇತುವೆ ಬಳಿ ಆರೋಪಿಯು ತೆಂಗಿನಕಾಯಿ ಕತ್ತರಿಸಲು ಬಳಸುವ ಕುಡುಗೋಲಿನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಈ ಕುರಿತು ಮಾತನಾಡಿರುವ ಪೋಲೀಸರು, ರಾಜೇಶ್ ತನ್ನ ಮಗಳಿಗೆ ವಿಚ್ಛೇದನ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ ಆರೋಪದ ಮೇಲೆ ನಾಗಮಣಿ ವಿರುದ್ಧ ದ್ವೇಷವನ್ನು ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತ ರೊಚ್ಚಿಗೆದ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net