ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ‘ಓಜಿ’ ಸಿನಿಮಾ; 1.30 ಲಕ್ಷ ರೂ. ಕೊಟ್ಟು ಬೆನಿಫಿಟ್ ಶೋ ಖರೀದಿಸಿದ ಅಭಿಮಾನಿ| Pawan Kalyan

Untitled design (78)
Published on

Pawan Kalyan: ತೆಲಂಗಾಣದಲ್ಲಿ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರ ಅಭಿಮಾನಿಯೊಬ್ಬ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಅವರ ‘ಓಜಿ’ ಸಿನಿಮಾದ ಬೆನಿಫಿಟ್ ಶೋದ ಒಂದು ಟಿಕೆಟ್​ ಅನ್ನು 1.30 ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

ಭಾನುವಾರ(ಸೆ. 21) ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲೆಯ ಚೌಟುಪ್ಪಲ್‌ನಲ್ಲಿರುವ ಶ್ರೀನಿವಾಸ ಥಿಯೇಟರ್‌ನಲ್ಲಿ ಬೆನಿಫಿಟ್ ಶೋದ ಟಿಕೆಟ್ ಹರಾಜು ನಡೆಯಿತು. ಈ ವೇಳೆ ಚೌಟುಪ್ಪಳ್ಳ ಮಂಡಲದ ಲಕ್ಕರಂ ಗ್ರಾಮದ ಪವನ್ ಅಭಿಮಾನಿ ಅಮುದಲ ಪರಮೇಶ್, ಪವನ್ ಕಲ್ಯಾಣ್ ಮೇಲಿನ ತನ್ನ ಅಭಿಮಾನವನ್ನು 1.30 ಲಕ್ಷ ಕೊಟ್ಟು ಒಂದು ಟಿಕೆಟ್ ಖರೀದಿಸಿ ಅಭಿಮಾನ ತೋರಿಸಿದ್ದಾರೆ. ಸಾಮಾನ್ಯ ಟಿಕೆಟ್ ಬೆಲೆ 800 ರೂಪಾಯಿ.

ವಿಶೇಷ ಪ್ರದರ್ಶನದಲ್ಲಿ ಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಪಡೆಯಲು ಹರಾಜಿನಲ್ಲಿ ಹಲವರು ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸೆಪ್ಟೆಂಬರ್ 25 ರಂದು ಬೆಳಿಗ್ಗೆ 1 ಗಂಟೆಗೆ ಚಿತ್ರಮಂದಿರಗಳಲ್ಲಿ ಬೆನಿಫಿಟ್ ಶೋ ನಿಗದಿಯಾಗಿದೆ ಎನ್ನಲಾಗಿದೆ.

ಪವನ್ ಕಲ್ಯಾಣ್ ಅವರ ಓಜಿ ಚಿತ್ರವನ್ನು ಸುಜೀತ್ ನಿರ್ದೇಶಿಸಿದ್ದಾರೆ. ಡಿವಿವಿ ಎಂಟರ್​ಟೈನ್​ಮೆಂಟ್ ನಿರ್ಮಿಸಿದೆ. ನಿನ್ನ ಭಾನುವಾರ(ಸೆ.21) ಸಿನಿಮಾದ ಪ್ರೀ ರೀಲಿಸ್ ಇವೆಂಟ್, ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net