ಭಾರಿ ಜನಸಮೂಹ ಸೇರಿದ ಮಾತ್ರಕ್ಕೆ, ಅದು ಮತಗಳಾಗಿ ಪರಿವರ್ತನೆ ಆಗಲ್ಲ; ದಳಪತಿ ವಿಜಯ್​ಗೆ ಟಾಂಗ್ ನೀಡಿದ ಕಮಲ್ ಹಾಸನ್| Kamal Haasan

Untitled design (77)
Published on

Kamal Haasan: ಒಬ್ಬ ಜನಪ್ರಿಯ ಸಿನಿಮಾ ನಾಯಕನಿಗೆ ಭಾರಿ ಜನಸಮೂಹ ಸೇರಿದ ಮಾತ್ರಕ್ಕೆ, ಅದು ಮತಗಳಾಗಿ ಪರಿವರ್ತನೆ ಆಗಲ್ಲ. ಈ ನಿಯಮ ನನಗೂ ಸೇರಿ ಟಿವಿಕೆ ನಾಯಕ ದಳಪತಿ ವಿಜಯ್​ಗೂ ಅನ್ವಯಿಸುತ್ತದೆ ಎಂದು ಭಾನುವಾರ(ಸೆ. 21) ಮಕ್ಕಳ್ ನಿಧಿ ಮೈಯಂ ಪಕ್ಷದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಕಮಲ್ ಹಾಸನ್  ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ದಳಪತಿ ವಿಜಯ್, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಈ ವೇಳೆ ವಿಜಯ್​ ಱಲಿಗೆ ಭಾರೀ ಜನಸಮೂಹ ಕೂಡುತ್ತಿದೆ. ಇದನ್ನು ನೋಡಿ ಉಳಿದ ರಾಜಕೀಯ ಪಕ್ಷಗಳಿಗೆ ಭಯ ಮೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಕುರಿತು ಭಾನುವಾರ ಚೆನ್ನೈನನಲ್ಲಿ ಮಾತನಾಡಿರುವ ಕಮಲ್ ಹಾಸನ್, ವಿಜಯ್ ಅವರನ್ನು ಬೆಂಬಲಿಸಿ ಸೇರುವ ಜನಸಮೂಹವು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಇದು ನನಗೆ ಮತ್ತು ಭಾರತದ ಎಲ್ಲಾ ನಾಯಕರಿಗೆ ಅನ್ವಯಿಸುತ್ತದೆ ಎಂದರು.

ಇದೇ ವೇಳೆ ನಟ ವಿಜಯ್​ಗೆ ಸಲಹೆ ನೀಡಿದ ಅವರು, ಸರಿಯಾದ ಹಾದಿಯಲ್ಲಿ ಹೋಗಿ, ಧೈರ್ಯದಿಂದ ಮುಂದುವರಿಯಿರಿ ಮತ್ತು ಜನರಿಗೆ ಒಳ್ಳೆಯದನ್ನು ಮಾಡಿ ಮತ್ತು ಇದು ಎಲ್ಲಾ ನಾಯಕರಿಗೆ ನನ್ನ ಮನವಿ. ರಾಜಕೀಯ ಬಿಡಿ, ಸಿನಿಮಾದಲ್ಲೂ ಟೀಕೆಗಳಿರುತ್ತವೆ ಎಂದು ಹೇಳಿದ್ದಾರೆ.  

ತಮಿಳುನಾಡಿನಲ್ಲಿ ತಮಿಳಿಗ ವೆಟ್ರಿ ಕಳಗಂ ಪಕ್ಷ ಕಟ್ಟಿ ರಾಜಕಾರಣ ಶುರು ಮಾಡಿರುವ ತಮಿಳು ಸೂಪರ್ ಸ್ಟಾರ್ ವಿಜಯ್, ವಾರಾಂತ್ಯದಲ್ಲಿ ಶನಿವಾರ & ಭಾನುವಾರ ಎರಡು ದಿನ ರಾಜಕೀಯ ಸಭೆಗಳನ್ನು ನಡೆಸುತ್ತಿದ್ದಾರೆ. ಒಟ್ಟು ಮೂರು ನಗರಗಳನ್ನು ಕವರ್ ಮಾಡುತ್ತಿದ್ದಾರೆ. ಕಳೆದ ವಾರ ತಿರುಚ್ಚಿ, ಮೊನ್ನೆ ನಾಗಪಟ್ಟಣಂ ಜಿಲ್ಲೆಯಲ್ಲಿ ಸಭೆ ನಡೆಸಿದ್ದರು. ವಿಜಯ್ ನೋಡಲು ಸಭೆಗಳಿಗೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net