

ಬೆಂಗಳೂರು: ಅದಮ್ಯ ಚೇತನ ಮತ್ತು ಅನಂತ್ಕುಮಾರ್ ಪ್ರತಿಷ್ಠಾನವು ಹಿರಿಯ ರಾಜಕಾರಣಿ ದಿ.ಅನಂತಕುಮಾರ್ರ 61ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು(ಸೆ.22) 'ಅನಂತ ನಮನ 2020' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆನ್ಲೈನ್ ಮೂಲಕ ಸಾರ್ವಜನಿಕರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಮಂಗಳವಾರ ಸಂಜೆ 4:30ಕ್ಕೆ ವಿಧಾನಸೌಧದಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ದೆಹಲಿಯಿಂದಲೇ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಮಂತ್ರಿಗಳು, ಶಾಸಕರು ಕೂಡ ಪಾಲ್ಗೊಳ್ಳುವರು. ನೀವು ಕೂಡ https://www.youtube.com/AnanthKumarPratishthana/ ಅಥವಾ
https://youtu.be/M4PdXikBtvE ಮೂಲಕ ಸಂಜೆ 4.30ಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.