ನೀತಾ ಅಂಬಾನಿ, ಮುಖೇಶ್‌ ಅಂಬಾನಿಯಿಂದ ಬಡವರಿಗಾಗಿ ಸಾಮೂಹಿಕ ವಿವಾಹ

Nita ambani Mukesh Ambani
Published on

ನವದೆಹಲಿ: ನೀತಾ ಅಂಬಾನಿ ಹಾಗೂ ಮುಖೇಶ್‌ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ವೈವಾಹಿಕ ಜೀವನ ಶುರುಮಾಡಲಿದ್ದಾರೆ. ಅಂಬಾನಿ ಕುಟುಂಬ ಮಗನ ಮದುವೆಗೂ ಮುನ್ನ ದೀನದಲಿತರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಿದ್ಧರಾಗಿದ್ದಾರೆ.

ಮುಖೇಶ್ ಮತ್ತು ನೀತಾ ಅಂಬಾನಿ ಜುಲೈ 2 ರಂದು ಪಾಲ್ಘರ್ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ದೀನದಲಿತರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ನೀತಾ ಅಂಬಾನಿ ಸೋಮವಾರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು ಮತ್ತು ಶಿವನ ಸನ್ನಿಧಿಯಲ್ಲಿ ಮೊದಲ ವಿವಾಹ ಆಮಂತ್ರಣವನ್ನು ನೀಡಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಜುಲೈ 12 ರ ಶುಕ್ರವಾರ ಶುಭ ವಿವಾಹ ಸಮಾರಂಭದೊಂದಿಗೆ ಪ್ರಾರಂಭವಾಗಲಿದೆ.

ಜುಲೈ 13 ರ ಶನಿವಾರದಂದು ಶುಭ್ ಆಶಿರ್ವಾದ್ ಆಚರಣೆಗಳು ನಡೆಯಲಿದ್ದು, ಅಂತಿಮ ಕಾರ್ಯಕ್ರಮ, ಮಂಗಲ್ ಉತ್ಸವ್ ಅಥವಾ ವಿವಾಹ ಆರತಕ್ಷತೆಯನ್ನು ಜುಲೈ 14 ರ ಭಾನುವಾರ ನಿಗದಿಪಡಿಸಲಾಗಿದೆ. ಈ ಸಮಾರಂಭಕ್ಕಾಗಿ, ಅತಿಥಿಗಳಿಗೆ ‘ಇಂಡಿಯನ್ ಚಿಕ್’ ಧರಿಸಲು ಕೇಳಲಾಗಿದೆ. ಈ ಸಮಾರಂಭಕ್ಕೆ ಪ್ರಪಂಚದಾದ್ಯಂತದ ತಾರೆಯರು ಸೇರಿದಂತೆ ಅನೇಕ ಅತಿಥಿಗಳನ್ನು ಮದುವೆ ಆಹ್ವಾನಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net