ಅನಂತ್​ ಅಂಬಾನಿಯ ಈ ಕೆಲಸ ನೋಡಿ ಫುಲ್​​ ಫಿದಾ; ರಿಚ್​ ಮ್ಯಾನ್​ ವಿತ್​ ಗೋಲ್ಡೆನ್​ ಹಾರ್ಟ್​ ಎಂದಿದ್ದೇಕೆ ನೆಟ್ಟಿಗರು

Untitled-design-2024-07-14T131716.259
Published on

ಮುಂಬೈ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪುತ್ರ ಅನಂತ್​ ಅಂಬಾನಿ ಅವರು ರಾಧಿಕಾ ಮರ್ಚೆಂಟ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಯೋ ವರ್ಲ್ಡ್​​ ಕನ್ವೆನ್ಷನ್​​​ ಸೆಂಟರ್​​ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಜಾಗತಿಕ ಐಕಾನ್​​, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಬಾಲಿವುಡ್​ ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು.

ಹೈಪ್ರೊಫೈಲ್​​ ಮದುವೆಯ ವೀಡಿಯೊಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಈ ವೀಡಿಯೊಗಳ ವೈರಲ್​ ಆಗುತ್ತಿರುವ ನಡುವೆ ಅನಂತ್​​ ಅಂಬಾನಿ ಅವರ ವಿಶೇಷ ವೀಡಿಯೊ ಒಂದು ಸುದ್ದಿ ಮಾಡುತ್ತಿದೆ. ಆದರೆ ಈ ವೀಡಿಯೊ ಅನಂತ್​ ಮತ್ತು ರಾಧಿಕಾ ಅವರ ವಿವಾಹಕ್ಕೆ ಸಂಬಂಧಿಸಿದ್ದಲ್ಲ. ಸದ್ಯ ವೈರಲ್​ ಆಗುತ್ತಿರುವ ಈ ವೀಡಿಯೊ ಹಳೆಯದು ಎಂದು ಹೇಳಲಾಗುತ್ತಿದೆ. ಈ ವೀಡಿಯೊದಲ್ಲಿ ಅನಂತ್​​ ಅಂಬಾನಿ ಅವರ ಕೆಲಸ ನೋಡಿ ನೆಟ್ಟಿಗರು ಸಂತೋಷಗೊಂಡು ಸಾಕಷ್ಟು ಹೊಗಳುತ್ತಿದ್ದಾರೆ.

ಈ ಹಳೇ ವೀಡಿಯೊ ಅನಂತ್​ ಅಂಬಾನಿ ಅವರ ಅಭಿಮಾನಿಗಳ ಇನ್​ಸ್ಟಾಗ್ರಾಮ್​​ನಿಂದ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಬೆಂಗಾವಲು ಪಡೆಯ ಬಿಗಿಭದ್ರತೆಯ ನಡುವೆ ಅನಂತ್​​​ ತಮ್ಮ ಕಾರಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾರೆ. ಆಗ ರಸ್ತೆಬದಿಯಲ್ಲಿ ನಿಂತಿದ್ದ ಒಬ್ಬ ಹುಡುಗ ಅನಂತ್​ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಾಗಿ ಕೈಸನ್ನೆಯಿಂದ ಕೇಳುತ್ತಾರೆ. ಮೊದಲಿಗೆ ಭದ್ರತಾ ಸಿಬ್ಬಂದಿ ಹುಡುಗನ ಮನವಿಯನ್ನು ನಿರಾಕರಿಸಿ ಹತ್ತಿರ ಬರಲು ಬಿಡುವುದಿಲ್ಲ. ಇದನ್ನು ಗಮನಿಸಿದ ಅನಂತ್​ ಅಂಬಾನಿ ತನ್ನ ಬೆಂಗಾವಲು ಪಡೆಯನ್ನು ನಿಲ್ಲಿಸಿ ಹುಡುಗನನ್ನು ತನ್ನ ಬಳಿಗೆ ಕರೆಸಿಕೊಳ್ಳುತ್ತಾರೆ. ಅಭಿಮಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ ಬಳಿಕ ಹುಡುಗ ಹಸ್ತಲಾಘನ ಮಾಡಲು ಬಯಸಿದ್ದನು ನೋಡಿ ಹಸ್ತಲಾಘನ ಮಾಡುತ್ತಾರೆ.

ಸದ್ಯ ಅನಂತ್​ ಅಂಬಾನಿ ಈ ವೀಡಿಯೊ ಬಗ್ಗೆ ನೆಟ್ಟಿಗರು ಹೊಗಳುತ್ತಾ ಸಾಕಷ್ಟು ಕಾಮೆಂಟ್​ ಮಾಡುತ್ತಿದ್ದಾರೆ. ಬಾಲಿವುಡ್​ ಸೆಲಿಬ್ರಿಟಿಗಳಿಗಿಂತ ಅನಂತ್​ ಎಷ್ಟೋ ಉತ್ತಮ, ರಿಚ್​ ಮ್ಯಾನ್​ ವಿತ್​ ಗೋಲ್ಡೆನ್​ ಹಾರ್ಟ್, ಅಲ್ಲದೆ ಅನಂತ್​ ಅಂಬಾನಿ ಅವರ ಡ್ರೈವರ್​ ಅವರು ಫೋಟೋ ಕ್ಲಿಕ್ಕಿಸಿಕೊಳ್ಲಲು ಕಾರಿನಲ್ಲಿ ಲೈಟ್​ ಹಾಕಿದ್ದಾರೆ ಎಂದು ಹೊಗಳುತ್ತಾ ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net