ಅನಂತ್ ಅಂಬಾನಿ ಮದುವೆ ಊಟದಲ್ಲಿ ಸಿಕ್ತು ಕೂದಲು; ವೈರಲ್​ ಆಗುತ್ತಿದೆ ವಿಡಿಯೋ

Orry VadaPav
Published on

ಮುಂಬೈ: ಮುಕೇಶ್​ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇದೀಗ ಮದುವೆ ಕಾರ್ಯಕ್ರಮವು ಮತ್ತೊಂದು ವಿಚಾರಕ್ಕೆ ಜನರ ಗಮನ ಸೆಳೆದಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಗುಜರಾತ್​ನ ಜಾಮ್​ನಗರದಲ್ಲಿ ಆರಂಭವಾದ ಮೊಲದ ಪ್ರೀ ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಬಾಲಿವುಡ್​ ಹಾಗೂ ಕ್ರೀಡಾ ಲೋಕದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಕೆಲವು ವಾರಗಳ ಹಿಂದೆ ಇಟಲಿಯಲ್ಲಿ ಅದ್ದೂರಿಯಾಗಿ ಪ್ರೀ-ವೆಡ್ಡಿಂಗ್​ ಸಮಾರಂಭ ಮಾಡಲಾಯಿತು. ಆ ವೇಳೆ ನೀಡಿದ ಆಹಾರದಲ್ಲಿ ಕೂದಲು ಸಿಕ್ಕಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರ ಸಖತ್ ವೈರಲ್​ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿರುವ, ಬಾಲಿವುಡ್​ ನಟ-ನಟಿಯರ ಆಪ್ತ ಒರ್ಹಾನ್​ ಅವತ್ರಮಣಿ ಅಲಿಯಾಸ್​ ಒರಿ ಇಟಲಿಯಲ್ಲಿ ಅದ್ದೂರಿಯಾಗಿ ನಡೆದ ಪ್ರೀ-ವೆಡ್ಡಿಂಗ್ ಸಮಾರಂಭದ ಕೆಲವು ತುಣುಕುಗಳನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಇದರ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದು ಅತಿಥಿಗಳಿಗೆ ತಯಾರಿಸಿದ್ದ ನೂರಾರು ಬಗೆಯ ಆಹಾರದ ಬಗ್ಗೆಯೂ ಮಾತನಾಡಿದ್ದಾರೆ. ಇದರಲ್ಲಿ ಭಾರತದ ಫೇಮಸ್​ ಖಾದ್ಯವಾದ ವಡಾಪಾವ್​ಅನ್ನು ಕೂಡ ಮಾಡಿಸಲಾಗಿತ್ತು. ಇದರ ಬಗ್ಗೆ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದೆ.

ಒರಿ ಮತ್ತು ಅವರ ಸ್ನೇಹಿತೆ ತಾನಿಯಾ ಶ್ರಾಫ್​ ಅವರು ಹಲವು ಆಹಾರಗಳ ರುಚಿ ಸವಿದಿದ್ದಾರೆ. ಅದರ ನಡುವೆ ಅವರು ವಡಾ ಪಾವ್​ ಕೂಡ ತಿಂದಿದ್ದಾರೆ. ತಿನ್ನುವುದಕ್ಕೂ ಮುನ್ನವೇ ಇದು ಅತ್ಯುತ್ತಮ ವಡಾ ಪಾವ್​ ಎಂದು ಒರಿ ಬಣ್ಣಿಸಿದ್ದಾರೆ. ಒರಿ ಗೆಳತಿ ತಾನಿಯಾ ಶ್ರಾಫ್​ ನನಗೆ ಇನ್ನೊಂದು ವಡಾ ಪಾವ್​ ತಿನ್ನುವ ಆಸೆಯಾಗಿತ್ತು. ಆದರೆ ಅದರಲ್ಲಿ ಕೂದಲು ಇತ್ತು ಎಂದು ಅವರು ಹೇಳುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದರ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net