ಟೀಮ್​ ಇಂಡಿಯಾ ಬೌಲಿಂಗ್​ ಕೋಚ್​ ಆಗಿ ಆರ್​ಸಿಬಿ ಮಾಜಿ ಪ್ಲೇಯರ್​; ಬಿಸಿಸಿಐಗೆ ಸ್ಪೆಷಲ್​ ಲಿಸ್ಟ್​ ಸಲ್ಲಿಸಿದ ಗೌತಮ್ ಗಂಭೀರ್

Gautham Gambhir
Published on

ನವದೆಹಲಿ: ಟೀಮ್​ ಇಂಡಿಯಾದ ನೂತನ ಕೋಚ್​ ಆಗಿ ಬಿಸಿಸಿಐ ಗೌತಮ್​ ಗಂಭೀರ್​ ಅವರನ್ನು ನೇಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡಕ್ಕೆ ಸಿಕ್ಕಿರುವ ಸಕ್ಸಸ್​ ಮುಂದುಬವರೆಸುವ ನಿಟ್ಟಿನಲ್ಲಿ ಬಿಸಿಸಿಐ ಗೌತಮ್​ ಗಂಭೀರ್​ರನ್ನು ನೇಮಿಸಿದ್ದು, ಮಾಜಿ ಆರಂಭಿಕ ಆಟಗಾರ ಕೋಚ್​ ಆಗಿ ಯಶ ಕಾಣಲಿದ್ದಾರಾ ಎಂದು ಕಾದು ನೋಡಬೇಕಿದೆ.

ಟೀಮ್​ ಇಂಡಿಯಾ ನೂತನ ಕೋಚ್​ ಆಗಿ ನೇಮಕಗೊಳ್ಳುತ್ತಿದ್ದಂತೆ ಮೇಜರ್ ಸರ್ಜರಿಗೆ ಮುಂದಾಗಿರುವ ಗೌತಮ್​ ಗಂಭೀರ್​ ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳು ಮುಂದಾಗಿದ್ದು, ಅಸ್ಟಿಸೆಂಟ್​ ಕೋಚ್​ ಹುದ್ದೆಗೆ ಅಭಿಷೇಕ್​ ನಾಯರ್ ಹಾಗೂ ಆರ್​ಸಿಬಿ ತಂಡದ ಮಾಜಿ ಆಟಗಾರ, ದಾವಣಗೆರೆ ಎಕ್ಸ್​ಪ್ರೆಸ್​ ಎಂದೇ ಖ್ಯಾತಿ ಪಡೆದಿರುವ ವಿನಯ್​ ಕುಮಾರ್​ರನ್ನು ಭಾರತ ತಂಡದ ಬೌಲಿಂಗ್​ ಕೋಚ್​ ಆಗಿ ನೇಮಿಸಲು ಗೌತಮ್​ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Supporting Staff

ಸಹಾಯಕ ಸಿಬ್ಬಂದಿ ನೇಮಕ ಸಂಬಂಧ ಗೌತಮ್​ ಈಗಾಗಲೇ ಬಿಸಿಸಿಐಗೆ ಲಿಸ್ಟ್​ ಒಂದನ್ನು ನೀಡಿದ್ದು, ಅಭಿಷೇಕ್​ ನಾಯರ್​ರನ್ನು ಸಹಾಯಕ ಕೋಚ್​ ಹುದ್ದೆಗೆ ವಿನಯ್​ ಕುಮಾರ್​ರನ್ನು ಬೌಲಿಂಗ್​ ಕೋಚ್​ ಆಗಿ ನೇಮಿಸುವಂತೆ ಗಂಭೀರ್​ ಸಲ್ಲಿಸಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಬಿಸಿಸಿಐ ಕೂಡ ಇದಕ್ಕೆ ಅನುಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಸಿರುವ ಸಾಧ್ಯತೆ ದಟ್ಟವಾಗಿದೆ.

ನನ್ನ ದೇಶಕ್ಕೆ ಗೌರವ ಸಲ್ಲಿಸಲು ಅವಕಾಶ ಸಿಕ್ಕಿರುವುದು ತುಂಬಾ ಸಂತೀಷವಾಗಿದೆ. ಭಾರತ ತಂಡಕ್ಕೆ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ರಾಹುಲ್​ ದ್ರಾವಿಡ್​ ಹಾಗೂ ಸಹಾಯಕ ಸಿಬ್ಬಂದಿಗೆ ನಾನು ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆಟವಾಡುತ್ತಿದ್ದಾಗ ನಾನು ಭಾರತದ ಜೆರ್ಸಿ ಧರಿಸಲು ತುಂಬಾ ಖುಷಿಪಡುತ್ತಿದ್ದೆ. ಈಗ ಕೋಚ್​ ಆಗಿ ಹೊಸ ಪಾತ್ರ ನಿಭಾಯಿಸಲು ಉತ್ಸುಕನಾಗಿದ್ದೇನೆ ಎಂದು ಕೋಚ್​ ಹುದ್ದೆಗೆ ಆಯ್ಕೆಯಾದ ಬಳಿಕ ಗೌತಮ್​ ಗಂಭೀರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net