ನವದೆಹಲಿ: ಯುಎಸ್-ವೆಸ್ಟ್ಇಂಡೀಸ್ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್ ಮುಗಿದು 10 ದಿನಗಳು ಕಳೆದು ಭಾರತ ತಂಡಕ್ಕೆ ನೂತನ್ ಕ್ರಿಕೆಟ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡರೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಮಾತ್ರ ಯಾಕೋ ಸುಮ್ಮನಾಗುವಂತೆ ಕಾಣುತ್ತಿಲ್ಲ. ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡವು ಸೆಮಿಫೈನಲ್ನಲ್ಲಿ ಸೋತ ಬಳಿಕ ವಿಶ್ವ ಚಾಂಪಿಯನ್ ಭಾರತದ ವಿರುದ್ಧ ಒಂದಿಲ್ಲೊಂದು ಆರೋಪ ಟೀಕೆ ಮಾಡುತ್ತಿರುವ ಮೈಕೆಲ್ ವಾನ್ ಇದೀಗ ವಿರಾಟ್ ಹಾಗೂ ರೋಹಿತ್ ಕುರಿತು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.
ಜೂನ್ 29ರಂದು ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚುಟುಕು ಕ್ರಿಕೆಟ್ ಸಮರದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಟೂರ್ನಿಯಲ್ಲಿ ತಂಡ ಗೆದ್ದ ನಂತರ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಸ್ಮರಣಾರ್ಥ ವಿದಾಯ ಹೇಳಿದ್ದರು.
ಇದನ್ನೂ ಓದಿ: ಶಾಲೆಯ ಕೊಠಡಿಯಲ್ಲೇ ಪ್ರಾಂಶುಪಾಲ-ಶಿಕ್ಷಕಿಯ ಲವ್ವಿ ಡವ್ವಿ; ವಿಡಿಯೋ ವೈರಲ್
ಈ ಮೂವರು ಆಟಗಾರರ ನಿವೃತ್ತಿ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ವಿರಾಟ್, ರೋಹಿತ್ ಹಾಗೂ ರವೀಂದ್ರ ಜಡೇಜಾ ಅವರು ವಯಸ್ಸು 35 ದಾಟಿದ್ದು, ಈ ಹಿನ್ನೆಲೆಯಲ್ಲಿ ಅವರು ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವ ಮೂಲಕ ಯುವ ಆಟಗಾರರಿಗೆ ಟಿ20 ತಂಡದಲ್ಲಿ ಅವಕಾಶ ಸಿಗುವಂತೆ ಮಾಡಿದ್ದಾರೆ. ಆದರೆ, ನನ್ನ ಪ್ರಕಾರ ಈ ಮೂವರು ಆಟಗಾರರು ಇನ್ನಷ್ಟು ಟಿ20 ಟ್ರೋಫಿಗಳನ್ನು ಗೆಲ್ಲಬೇಕೆಂದು ಬಯಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವ ಪರಿಪೂರ್ಣ ಹಾದಿಯ ಬಗ್ಗೆ ಇವರೆಲ್ಲ ನಿರ್ಧರಿಸಿದ್ದರು. ಮತ್ತೊಂದು ಟಿ20 ವಿಶ್ವಕಪ್ ಅನ್ನು ತಮ್ಮ ಕೈಯಲ್ಲಿ ಹಿಡಿಯಲು ರೋಹಿತ್ ಶರ್ಮಾ 17 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇನ್ನೂ ಒಂದು ಅಥವಾ ಎರಡು ಟ್ರೋಫಿಗಳನ್ನು ಗೆಲ್ಲಬೇಕೆಂದು ಮೊದಲು ರೋಹಿತ್ ಶರ್ಮಾ ಅವರೇ ಸ್ವತಃ ಹೇಳಬೇಕಾಗಿತ್ತು. ನಿವೃತ್ತಿ ಘೋಷಿಸಿದ ಈ ಮೂವರು ಆಟಗಾರರ ನಿರ್ಧಾರವನ್ನುಸ್ವಾಗತಾರ್ಹವಾಗಿದ್ದು, ಟೆಸ್ಟ್, ಏಕದಿನದ ಜೊತೆಗೆ ಇವರು ಐಪಿಎಲ್ ಆಡುವ ಕಡೆಗೆ ಗಮನ ಕೊಡಲಿ ಎಂದು ಮೈಕೆಲ್ ವಾನ್ ಹೇಳಿದ್ದಾರೆ.