ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆ ಆಮಂತ್ರಣ ಪತ್ರಿಕೆ ವೈರಲ್​; ಎಲ್ಲಿ, ಯಾವಾಗ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Anant Radhika
Published on

ಮುಂಬೈ: ವಿಶ್ವದ ಟಾಪ್​ ಮೋಸ್ಟ್​ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಖೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹ ಕಾರ್ಯಕ್ರಮವು ಜುಲೈ 12ರಂದು ಮುಂಬೈನಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯ ಫೋಟೋಗಳು ಸಖತ್​ ವೈರಲ್​ ಆಗಿದೆ.

ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ಕನ್ವೆನ್ಷನ್​ ಸೆಂಟರ್​ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಸಾಂಪ್ರದಾಯಿಕ ಕೆಂಪು ಮತ್ತು ಚಿನ್ನದ ಕಾರ್ಡ್ ಆಗಿರುವ ‘ಸೇವ್‌ ದಿ ಡೇಟ್‌’ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳು ಸ್ವೀಕರಿಸುತ್ತಿದ್ದಾರೆ.

ಮದುವೆ ಸಂಭ್ರಮದ ಕಾರ್ಯಕ್ರಮಗಳು (ಜು.12 ರಿಂದ 14) ಮೂರು ದಿನಗಳ ಕಾಲ ಜರುಗಲಿವೆ. ಜು.12 ರಂದು ಶುಭ ವಿವಾಹದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಜು.13 ರ ಶನಿವಾರ ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ ಇರಲಿದೆ. ಜು.14ರ ಭಾನುವಾರದಂದು ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.

ನೀತಾ ಮತ್ತು ಮುಖೇಶ್ ಅಂಬಾನಿ ಈ ವಾರ ಯುರೋಪ್‌ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ನಾಲ್ಕು ದಿನಗಳ ವಿವಾಹ ಪೂರ್ವ ಸಮಾರಂಭವನ್ನು ಆಯೋಜಿಸುತ್ತಿದ್ದಾರೆ. ರಾಜಕೀಯ, ಕ್ರೀಡೆ, ಚಿತ್ರರಂಗ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net