ಅನಂತ್ ಅಂಬಾನಿ – ರಾಧಿಕಾ ಹನಿಮೂನ್‌ಗೆ ಹೋಗಿದ್ದು ಎಲ್ಲಿಗೆ ಗೊತ್ತಾ?; ಮದುವೆ ಬಳಿಕ ಕಾಣಿಸಿಕೊಂಡಿದ್ದು…

Anant Radhika
Published on

ನವದೆಹಲಿ​: ವಿಶ್ವದ ಟಾಪ್​ ಮೋಸ್ಟ್ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಕೇಶ್​-ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹ ಮಹೋತ್ಸವವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​ ಕನ್ವೆನ್​ಷನ್​ ಸೆಂಟರ್​ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಸಿನಿಮಾ, ರಾಜಕೀಯ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಮದುವೆಯಲ್ಲಿ ಪಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.

ಇದೀಗ ಈ ನವ ಜೋಡಿ ಹನಿಮೂನ್ ಗೆ ಎಲ್ಲಿಗೆ ಹೋಗಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ಗುಸುಗುಸು ಜೋರಾಗಿ ನಡೆಯುತ್ತಿದೆ. ಮೊದಲಿಗೆ ದಂಪತಿಗಳು ದಕ್ಷಿಣ ಆಫ್ರಿಕಾದ ಕ್ರುಗರ್ ನ್ಯಾಷನಲ್​ ಪಾರ್ಕ್​, ಸ್ವಿಟ್ಜರ್​ಲ್ಯಾಂಡ್, ಬ್ರಿಟಿಷ್ ವರ್ಜಿನ್ ದ್ವೀಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ದಂಪತಿ ಇದ್ಯಾವ ಸ್ಥಳಕ್ಕೆ ಹೋಗದೆ ಹನಿಮೂನ್​ಗೆ ನವಜೋಡಿ ಸಿಟಿ ಆಪ್​ ಲವ್​ ಪ್ಯಾರಿಸ್​ಗೆ ತೆರಳಿದ್ದಾರೆ.

ಸಿಟಿ ಆಫ್​​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್​ನಲ್ಲಿ ದಂಪತಿ ಕಾಣಿಸಿಕೊಂಡಿದ್ದು, ಕೈ ಕೈ ಹಿಡಿದು ಸುತ್ತಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದೆ. ಇದಲ್ಲದೆ ಕ್ಯಾಮರಾಗಳಿಗೆ ದಂಪತಿ ಪೋಸ್​ ನೀಡಿದ್ದು, ಬಾಡಿಗಾರ್ಡ್​ಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ದಂಪತಿ ಪ್ಯಾರಿಸ್​ನಲ್ಲೇ ಹನಿಮೂನ್​ ಮಾಡಿಕೊಳ್ಳಲು ನಿರ್ಧಸಿರುವುದಾಗಿ ವರದಿಯಾಗಿದೆ.

ಈ ಹಿಂದೆ ಪ್ರೀ ವೆಡ್ಡಿಂಗ್ ಹಾಗೂ ಮದುವೆ​ ವಿಚಾರವಾಗಿ ಸುದ್ದಿ ಮಾಡಿದ್ದ ರಾಧಿಕಾ ಹಾಗೂ ಅನಂತ್​ ಇದೀಗ ತಮ್ಮ ಹನಿಮೂನ್​ ವಿಚಾರವಾಗಿಯೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ದಂಪತಿಗಳ ಫೋಟೋ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net