ಮೂಗೂರು ಗ್ರಾಪಂಗೆ ಅವಿರೋಧ ಆಯ್ಕೆ

ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಂ.ಡಿ.ಲೋಕೇಶ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು. ಶಾಂತಿರಾಜು, ಚಂದ್ರಮ್ಮ, ಪುಟ್ಟಮಾದಯ್ಯ, ಎಂ.ಎಸ್.ಗೌರೀಶ್ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಂ.ಡಿ.ಲೋಕೇಶ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು. ಶಾಂತಿರಾಜು, ಚಂದ್ರಮ್ಮ, ಪುಟ್ಟಮಾದಯ್ಯ, ಎಂ.ಎಸ್.ಗೌರೀಶ್ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಂ.ಡಿ.ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷ ಶಿವಣ್ಣ ಅವರು ರಾಜೀನಾಮೆ ನೀಡಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆಗೆ ಸೋಮವಾರ ಗ್ರಾಪಂ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

ಪ.ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎಂ.ಡಿ.ಲೋಕೇಶ್ ಅವರೊಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಪಂಚಾಯಿತಿ ಆಡಳಿತವನ್ನು ಬಿಜೆಪಿ, ಜೆಡಿಎಸ್ ಬೆಂಬಲಿತ ಮೈತ್ರಿಕೂಟದಲ್ಲಿಯೇ ಉಳಿಸಿಕೊಳ್ಳುವಲ್ಲಿ ಎರಡು ಪಕ್ಷಗಳ ಮುಖಂಡರು ಯಶಸ್ವಿಯಾಗಿದ್ದಾರೆ.

ಪಂಚಾಯಿತಿಯ 25 ಸದಸ್ಯರಲ್ಲಿ 18 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚುನಾವಣಾಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮ ಎಇಇ ರತೀಶ್ ಕಾರ್ಯನಿರ್ವಹಿಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಬೆಂಬಲಿಗರು ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಎಂ.ಡಿ.ಲೋಕೇಶ್ ಮಾತನಾಡಿ, ಬಿಜೆಪಿ ಜೆಡಿಎಸ್ ಮೈತ್ರಿಕೂಟ ಬೆಂಬಲಿತ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡು ಅವಿರೋಧ ಆಯ್ಕೆ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಮತ್ತು ಜನರಿಗೆ ಮೂಲಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸಲು ದುಡಿಯುತ್ತೇನೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಎಂ.ಶಾಂತಿ ರಾಜು, ಸದಸ್ಯರಾದ ಚಂದ್ರಮ್ಮ ಪುಟ್ಟಸ್ವಾಮಿ, ಮಹದೇವಮ್ಮ, ಎಂ.ಪುಟ್ಟಮಾದಯ್ಯ, ಭಾಗ್ಯ ಮಹದೇವಸ್ವಾಮಿ, ಎಂ.ಎಸ್.ಗೌರೀಶ್(ಮನು), ರತ್ನಮ್ಮ, ಎಂ.ಬಿ.ಮಹೇಶ, ಟಿ.ಎಂ.ಚೇತನ್, ಆಶಾ ಶಾಂತರಾಜು, ಲಕ್ಷ್ಮೀ ಮಹದೇವಸ್ವಾಮಿ, ರೋಜ ಪರಶಿವ, ನಾಗಮ್ಮ ಮಂಟಯ್ಯ, ಸವಿತ ಚಿನ್ನಸ್ವಾಮಿ, ಬಿ.ಎಸ್.ತಂಗಮ್ಮ ಮಹದೇವ, ಪಿಡಿಒ ಎಸ್.ಪ್ರಕಾಶ್, ಕಾರ್ಯದರ್ಶಿ ದೀಪಾ, ಜವರೇಗೌಡ, ಮಾಜಿ ಅಧ್ಯಕ್ಷ ಎಂ.ಜಗದೀಶ್ ಮೂರ್ತಿ, ತಾಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಪಿಎಸಿಸಿಎಸ್ ಅಧ್ಯಕ್ಷ ಮಹೇಂದ್ರಕುಮಾರ್, ಮಾಜಿ ಅಧ್ಯಕ್ಷ ಎಂ.ಆರ್.ಸುಂದರ್, ಮುಖಂಡರಾದ ಎಂ.ಪಿ.ಮರಿಸ್ವಾಮಿ, ಎಂ.ಸಿದ್ದರಾಜು, ಮಂಟಯ್ಯ, ಅರವಿಂದ, ಎಂ.ಕೆ.ಸಿದ್ದರಾಜು, ಶಿವಶಂಕರ್, ಕೆಂಚನಾಯಕ, ಮಹೇಶ್, ಹೊಸಹಳ್ಳಿ ಚಿನ್ನಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net