ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿ ಆರಂಭ: ನಿಮ್ಮ ಕ್ಲಾಸು ಯಾವ ಟೈಮಿಗಿದೆ ನೋಡ್ಕೊಳ್ಳಿ

sslc
Published on

ಬೆಂಗಳೂರು: ಕರೊನಾ ವೈರಸ್​ ಸೋಂಕು ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ ಪರೀಕ್ಷೆ ಮುಂದೆ ಹೋಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿರುವ ತಳಮಳ ನಿವಾರಣೆ ಮಾಡಲು ನಾಳೆಯಿಂದ (ಏ.14ರಿಂದ) ಆನ್​ಲೈನ್​ ತಗರಗತಿಗಳು ಆರಂಭವಾಗಲಿವೆ.

ತರಗತಿಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಮತ್ತು ಸಂಜೆ 4.30ರಿಂದ 6 ಗಂಟೆವರೆಗೆ ನಡೆಯಲಿದೆ.

ಆ್ಯಪ್​ ಡೌನ್​ಲೌಡ್​ ಮಾಡುವುದು ಹೇಗೆ?: ಆಂಡ್ರಾಯ್ಡ್​ ಪೋನ್​ ಇದ್ದರೆ ಪ್ಲೇ ಸ್ಟೋರ್​​ಗೆ ತೆರಳಿ ಅಲ್ಲಿ 'Onbimba app' ಡೌನ್​ಲೌಡ್​ ಮಾಡಿಕೊಂಡು ಇನ್​ಸ್ಟಾಲ್​ ಮಾಡಿಕೊಳ್ಳಬೇಕು. ನಂತರ ಆ್ಯಪ್​ ತೆರೆದು ಅದಕ್ಕೆ ತಮ್ಮ ವಯಕ್ತಿಕ ಮಾಹಿತಿ ನೀಡಬೇಕು ಅಂದರೆ, ನಿಮ್ಮ ಹೆಸರು, ಮೊಬೈಲ್​ ಸಂಖ್ಯೆ, ಇಮೇಲ್​ ಐಡಿ ಹಾಗೂ ಮೊಬೈಲ್​ ಸಂಖ್ಯೆ ನಮೂದಿಸಬೇಕು. ನಂತರ ಆ್ಯಪ್​ ತೆರೆದುಕೊಳ್ಳುತ್ತದೆ. ಆಗ go to SSLC online guru ಸೆಲೆಕ್ಟ್ it ಬಟನ್​ press ಮಾಡಿ ನಂತರ submit ಅಥವಾ OK ಕೊಟ್ಟರೆ ತರಗತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಆ್ಯಪ್​ ಅನ್ನು ಎಲ್ಲರೂ ಬಳಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net