ಕರೊನಾ ಬರುತ್ತೆ ಎಂದು 7 ವರ್ಷಗಳ ಹಿಂದೆಯೇ ಟ್ವಿಟ್ಟರ್​ನಲ್ಲಿ ಹೇಳಿಬಿಟ್ಟಿದ್ದ ಆತ!

Corona
Published on

ಬೆಂಗಳೂರು: ಕರೊನಾ ವೈರಸ್​ ಚೀನಾದಲ್ಲಿ ಪತ್ತೆಯಾಗಿ ವಿಶ್ವವ್ಯಾಪಿಯಾಗಿದೆ. 2019ರ ಡಿಸೆಂಬರ್​ನಲ್ಲಿ ಈ ವೈರಸ್​ ಮೊಟ್ಟ ಮೊದಲನೆಯದಾಗಿ ಚೀನಾದಲ್ಲಿ ಕಾಣಿಸಿಕೊಂಡಿತು. ಆದರೆ ಅದಕ್ಕೂ ಹಲವು ವರ್ಷಗಳ ಮೊದಲೇ ವ್ಯಕ್ತಿಯೊಬ್ಬ ಕರೊನಾ ಬರುತ್ತೆ ಎಂದು ತಿಳಿಸಿಬಿಟ್ಟಿದ್ದ.

ಹೌದು! ಕರೊನಾ ಬಗ್ಗೆ ಪುಸ್ತಕವೊಂದರಲ್ಲಿ ಪ್ರಕಟವಾಗಿತ್ತು ಎನ್ನುವ ಸುಳ್ಳು ಸುದ್ದಿ ಇತ್ತೀಚೆಗೆ ಪ್ರಚಾರ ತೆಗೆದುಕೊಂಡಿತ್ತು. ಆದರೆ ಫ್ಯಾಕ್ಟ್​ ಚೆಕ್​ನ ಮೂಲಕ ಅದು ಸುಳ್ಳೆನ್ನುವುದು ಬಯಲಾಗಿತ್ತು. ಇಲ್ಲೊಬ್ಬ ವ್ಯಕ್ತಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ 7 ವರ್ಷಗಳ ಹಿಂದೆ ಅಂದರೆ 2013ರಲ್ಲಿಯೇ ಕರೊನಾ ಬಗ್ಗೆ ಮಾತನಾಡಿದ್ದು, ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ.

ಮಾರ್ಕೊ ಹೆಸರಿನ ವ್ಯಕ್ತಿ 2013ರ ಜೂನ್​ 3ನೇ ತಾರೀಖಿನಂದು "ಕೊರನಾ ವೈರಸ್​... ಬರುತ್ತಿದೆ" ಎಂದು ಟ್ವೀಟ್​ ಮಾಡಿದ್ದ. ಟ್ವಿಟ್ಟರ್​ನಲ್ಲಿ ಅಷ್ಟೇನು ಫೇಮಸ್​ ಅಲ್ಲದ ಈ ವ್ಯಕ್ತಿಯ ಆ ಟ್ವೀಟ್​ನ್ನು ಯಾರೂ ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಆದರೆ ಇದೀಗ ಕರೊನಾ ಕಾಟ ಆರಂಭವಾಗುತ್ತಿದ್ದಂತೆಯೇ ಆತನ ಆ ಟ್ವೀಟ್​ ವೈರಲ್​ ಆಗುತ್ತಿದೆ.

2016ರಲ್ಲಿ ಕೊನೆಯದಾಗಿ ಟ್ವೀಟ್​ ಮಾಡಿರುವ ಮಾರ್ಕೊ ಯಾರು ಯಾವ ದೇಶದವನು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಏಳು ವರ್ಷಗಳ ಹಿಂದೆಯೇ ಈ ಅಪರಿಚಿತ ವ್ಯಕ್ತಿ ಅದೇಗೆ ಕರೊನಾ ಸೂಚನೆ ನೀಡಿದ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆತನ ಆ ಟ್ವೀಟ್​ನ್ನು ಲಕ್ಷಾಂತರ ನೆಟ್ಟಿಗರು ರೀಟ್ವೀಟ್​ ಮಾಡುತ್ತಿದ್ದು, ಅನೇಕರು ಆತ ಟ್ವಿಟ್ಟರ್​ನ್ನು ಹ್ಯಾಕ್​ ಮಾಡಿ ದಿನಾಂಕವನ್ನು ಬದಲಾಯಿಸಿದ್ದಾನೆ ಎನ್ನಲಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net