

ಸರಗೂರು: ಪಟ್ಟಣದ ನಿವಾಸಿ ಚನ್ನನಾಯಕ ಎಂಬುವರು ಕಾಣೆಯಾಗಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನನಾಯಕ ಅವರು ಇತ್ತೀಚಿಗೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸಂಬಂಧಿಕರ ಜೊತೆಯಲ್ಲಿ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಅವರನ್ನು ಹುಡುಕಿಕೊಡಿ ಎಂದು ಮಗ ಗೋವಿಂದರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ. ಚನ್ನನಾಯಕ ಅವರಿಗೆ 80 ವರ್ಷವಾಗಿದ್ದು, ಮನೆ ಬಿಡುವಾಗ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಪಂಚೆ ಮತ್ತು ಕೈನಲ್ಲಿ ನೀಲಿ ಬಣ್ಣದ ಬ್ಯಾಗ್ ಹಿಡಿದಿದ್ದರು. ಇವರ ಗುರುತು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.