ತಲೆ ಮೇಲೆ ಪ್ಲೆಕ್ಸ್ ಬಿದ್ದು ಕೋಮಗೆ ಜಾರಿದ ವೃದ್ಧ

Crime Logo
Published on

ಬೆಂಗಳೂರು: ಫ್ಲೆಕ್ಸ್ ತಲೆ ಮೇಲೆ ಬಿದ್ದು ವೃದ್ಧನಿಗೆ ಗಂಭೀರ ಗಾಯವಾಗಿದ್ದು ತೀವ್ರ ರಕ್ತಸ್ರಾವವಾಗಿ ಭಕ್ತವತ್ಸಲ(೭೧) ಎಂಬ ವೃದ್ಧ ಕೋಮಾಗೆ ಜಾರಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಶನಿವಾರ ಯಲಹಂಕದ ಸಿಂಗನಾಯಕನಹಳ್ಳಿಯ ಬಾಟ ಷೋ ರೂಮ್ ಬಳಿ ಮಧ್ಯಾಹ್ನ ೧೨ ಗಂಟೆಗೆ ಈ ಘಟನೆ ನಡೆದಿದೆ. ರಾಜಾನುಕುಂಟೆಯ ನಿವಾಸಿಯಾಗಿರುವ ಭಕ್ತವತ್ಸಲ ಎಂಬುವವರು ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅನಧಿಕೃತ ಫ್ಲೆಕ್ಸ್ ತಲೆ ಮೇಲೆ ಬಿದ್ದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು ಕೋಮಾಗೆ ಜಾರಿದ್ದಾರೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಮುಖಂಡನೊಬ್ಬನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾಕಿದ್ದ ಬೃಹತ್ ಗಾತ್ರದ ಫ್ಲೆಕ್ಸ್ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತವತ್ಸಲ ಮಗ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಹೋರ್ಡಿಂಗ್ಸ್ ದುರಂತ ಬಳಿಕವೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದಾದಿ ಹಿರಿಯ ಜೀವಕ್ಕೆ ಆಪತ್ತು ಬಂದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net