

ಕೊಳ್ಳೇಗಾಲ: ಶ್ರೀ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥದ ಮೂಲಕ ಮಾನವೀಯ ವಾತ್ಸಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಸಾಧಿಸುವ ಛಲವಿದ್ದರೆ ಏನ್ನನಾದರೂ ಸಾಧಿಸಬಹುದು ಎಂಬುದಕ್ಕೆ ವಾಲ್ಮೀಕಿ ಅವರು ಉದಾಹರಣೆಯಾಗಿದ್ದಾರೆ. ಸುಜ್ಞಾನದ ಕಡೆಗೆ ತೆರಳುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಮಾಯಣ ಮಹಾಕಾವ್ಯವು ಎಲ್ಲ ಕಾಲಘಟ್ಟಕ್ಕೂ ಆದರ್ಶವಾಗಿದೆ. ಪ್ರೀತಿ, ತ್ಯಾಗ, ದೃಢತೆ ರಾಮಾಯಣದಲ್ಲಿದೆ ಎಂದರು.
ಮೈಸೂರು ವಿವಿ ಜೆನಿಟಿಕ್ಸ್ ಮತ್ತು ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಸುತ್ತೂರು ಎಸ್.ಮಾಲಿನಿ ಮಾತನಾಡಿ, ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಸೂರ್ಯ, ಚಂದ್ರ ಇರುವವರೆಗೂ ಅಜಾರಾಮರ. ಪ್ರಸ್ತುತ ಮನೆ ಮನೆಗೂ ರಾಮಾಯಣ ಅಗತ್ಯವಿದೆ. ಸಹೋದರತ್ವ, ಪತಿ-ಪತ್ನಿಯ ಪವಿತ್ರವಾದ ಸಂಬಂಧ ಸೇರಿದಂತೆ ಹಲವು ಮೌಲ್ಯಗಳು ರಾಮಾಯಣದ ಲ್ಲಿರುವುದರಿಂದ ಪ್ರತಿಯೊಬ್ಬರೂ ಓದಿ ತಿಳಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಕೊಳ್ಳೇಗಾಲ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಡಿವೈಎಸ್‌ಪಿ ಎಂ.ಧರ್ಮೇಂದ್ರ, ತಹಸೀಲ್ದಾರ್ ಬಸವರಾಜು, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಗಡಿ, ನಗರಸಭೆ ಪೌರಾಯುಕ್ತ ನಟರಾಜು, ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ನಾಯಕ ಸಮುದಾಯದ ಗಡಿಮನೆ ಯಜಮಾನ ರವಿ ನಾಯಕ, ಕಟ್ಟೆಮನೆ ಯಜಮಾನ ದೊಡ್ಡ ಸೀಗ ನಾಯಕ, ಕಸಬಾ ಮನೆ ಯಜಮಾನರಾದ ಕೊಪ್ಪಳಿ ನಾಯಕ, ಸುರೇಂದ್ರ ಮತ್ತಿತರರಿದ್ದರು.