ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ; ಗದಗದಲ್ಲಿ ನಡೆಯಿತು ಹೃದಯ ಹಿಂಡುವ ಘಟನೆ!

ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ
Published on

ಗದಗ: ತಾಯಿ ಮತ್ತು ಮಗ ಸಾವಿನಲ್ಲೂ ಒಂದಾಗಿರುವ ಘಟನೆ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ನಡೆದಿದೆ. ಮಗ ಶಿವರುದ್ರಯ್ಯ ಅಂದಾನಯ್ಯ ಪೂಜಾರ್ (38) ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇಂದು ಮೃತಪಟ್ಟಿದ್ದಾನೆ. ಮಗ ಮೃತಪಟ್ಟಿರುವ ಸುದ್ದಿ ತಾಯಿ ಬಸಮ್ಮ ಅವರಿಗೆ ತಿಳಿಯುತ್ತಿದ್ದಂತೆ ಆಘಾತಗೊಂಡಿದ್ದಾರೆ.

ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿ ಬಸಮ್ಮ(68) ಅವರಿಗೆ ಹೃದಯಾಘಾತ ಉಂಟಾಗಿದೆ. ಇದರೊಂದಿಗೆ ತಾಯಿ ಮತ್ತು ಮಗ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ. ಇವರಿಬ್ಬರ ಸಾವಿನಿಂದ ಇಡೀ ಗ್ರಾಮದ ಜನರು ಶೋಕಸಾಗರದಲ್ಲಿ ಮುಳುಗಿದ್ದಾರೆ. ತಾಯಿ ಮತ್ತು ಮಗನ ಶವಗಳಿಗೆ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net