ಹಣ ಕೊಡಲಿಲ್ಲವೆಂದು ಮಾವನನ್ನು ಕೊಂದು ಗುಪ್ತಾಂಗವನ್ನು ಕತ್ತರಿಸಿದ ಸೊಸೆ…!

kmix
Published on

ಮಹಿಳೆಯೊಬ್ಬಳು ತನ್ನ ಮಾವನನ್ನು ಕೊಂದು ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಗುಜರಾತ್​ನ ಖೇಡಾದಲ್ಲಿ ನಡೆದಿದೆ. ವಿದೇಶಕ್ಕೆ ಹೋಗಲು 2 ಲಕ್ಷ ರೂ ಬೇಕೆಂದು ಮಹಿಳೆ ಕೇಳಿದ್ದಳು, ಆದರೆ ಮಾವ ಹಣ ನೀಡಲು ನಿರಾಕರಿಸಿದ್ದರು, ಕೋಪದಿಂದ ಸೊಸೆ ಮಾವನನ್ನು ಹತ್ಯೆ ಮಾಡಿ ಗುಪ್ತಾಂಗವನ್ನು ಕತ್ತರಿಸಿ, ತಲೆಗೆ ಬಲವಾಗಿ ಹೊಡೆದಿದ್ದಾಳೆ.


ಡಾಕೋರ್ ನಗರದೊಳಗಿನ ಭಗತ್ ಜಿ ಕಾಲೋನಿ ಕರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಜಗದೀಶ್ ಶರ್ಮಾ ಅವರ ಮೃತ ದೇಹವು ಸೆಪ್ಟೆಂಬರ್ 5 ರಂದು ಪತ್ತೆಯಾಗಿದೆ.


ಪೊಲೀಸರ ವಿಚಾರಣೆ ವೇಳೆ ಸೊಸೆ ತಪ್ಪೊಪ್ಪಿಕೊಂಡಿದ್ದು, 75 ವರ್ಷದ ಮೃತ ವ್ಯಕ್ತಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಅಕ್ರಮ ಸಂಬಂಧಕ್ಕೆ ಬದಲಾಗಿ ಹಣ ನೀಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.


ತಾನು ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ವಿದೇಶಕ್ಕೆ ಹೋಗಲು ಬಯಸಿದ್ದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಳೆ. ಆರೋಪಿ ಮಾವ ಬಳಿ ಹಣ ಕೇಳಿದ್ದಕ್ಕೆ ಹಣ ಕೊಡಲು ನಿರಾಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮಾವನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಳು.
ಸುಮಾರು ಮೂರು ದಿನಗಳಿಂದ ಮೃತರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ನಂತರ ಹಿರಿಯ ಮಗ ರಾಜಸ್ಥಾನದಲ್ಲಿರುವ ಅವರ ಸಂಬಂಧಿಕರ ಮನೆಗೆ ಹೋಗಿ ವಿಚಾರಿಸಿದ್ದ, ಆದರೆ ಆತ ಎಲ್ಲಿಯೂ ಪತ್ತೆಯಾಗಲಿಲ್ಲ. ಆದರೆ ಬಳಿಕ ಬಚ್ಚಲು ಮನೆಯ ಕೊಠಡಿಯೊಂದರಲ್ಲಿ ಶವ ಪತ್ತೆಯಾಗಿದೆ.


ಮೃತ ದೇಹವು ಕೊಳೆತ ಸ್ಥಿತಿಯಲ್ಲಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಟ್ಟಿಯಾದ ವಸ್ತುವಿನಿಂದ ಹಲ್ಲೆ ಮಾಡಲಾಗಿದೆ. ಅವರ ದೇಹದ ಇತರೆ ಭಾಗಗಳಲ್ಲಿ ಗಾಯದ ಗುರುತುಗಳಿವೆ ಎಂಬುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net