ಆಳ್ವಾಸ್ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅವರನ್ನು ಗೌರವಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ, ಫೋರಂ ಅಧ್ಯಕ್ಷೆ ಡಾ.ದೀಪಾ ಕೊಠಾರಿ ಮೊದಲಾದವರಿದ್ದರು.
ಮೂಡುಬಿದಿರೆ: ಪ್ರತಿಯೊಂದು ವೈಫಲ್ಯವೂ ಜೀವನದಲ್ಲಿ ಮಹತ್ವದ ಪಾಠ ಕಲಿಸಿ ವ್ಯಕ್ತಿಯನ್ನು ಯಶಸ್ಸಿಗೆ ಇನ್ನಷ್ಟು ಹತ್ತಿರಕ್ಕೆ ಕರೆದೊಯ್ಯಬಲ್ಲದು ಎಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ‘ಒಲಿವ್ ಗ್ರೀನ್ ಟು ಬ್ಯೂಟಿ ಕ್ವೀನ್-ಎ ಜರ್ನಿ ವಿದಿನ್’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ, ಎದುರಿಸಿದ ಸವಾಲು, ವೈಫಲ್ಯ, ಸಾಧನೆ ಹಂಚಿಕೊಂಡರು. ಸಂಪೂರ್ಣ ಪುರುಷ ಸೈನಿಕರಿಂದ ಕೂಡಿದ ಘಟಕದಲ್ಲಿ ಮಹಿಳಾ ಅಧಿಕಾರಿಯಾಗಿ ತನ್ನ ಸಾಮರ್ಥ್ಯ ಸಾಬೀತುಪಡಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿದರು. ಫೋರಂ ಅಧ್ಯಕ್ಷೆ ಡಾ.ದೀಪಾ ಕೊಠಾರಿ, ಸಕ್ಷಮ ಮಹಿಳಾ ಘಟಕ ಸಂಚಾಲಕಿ ಡಾ.ಗ್ರೀಷ್ಮಾ ವಿವೇಕ ಆಳ್ವ ಉಪಸ್ಥಿತರಿದ್ದರು. ಶ್ರದ್ಧಾ ಹೆಗ್ಡೆ ನಿರೂಪಿಸಿದರು. ಫಾತಿಮಾ ವಂದಿಸಿದರು.
ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅವರ ಜೀವನಗಾಥೆ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣದಾಯಕ. ವಿಮರ್ಶೆ, ತಿರಸ್ಕಾರ ಜೀವನದ ಅವಿಭಾಜ್ಯ ಅಂಗ. ಸಾರ್ವಜನಿಕ ಅಭಿಪ್ರಾಯಗಳಿಗೆ ಮಣಿಯದೆ ತಮ್ಮ ಗುರಿಯತ್ತ ದೃಢವಾಗಿ ಸಾಗಬೇಕು.