8 ವರ್ಷದ ಬಾಲಕಿಯನ್ನು ರೇಪ್​ ಮಾಡಿ ಬಾವಿಗೆ ಎಸೆದ ಪಾಪಿ!

rape
Published on

ಜೈಪುರ: ಎಂಟು ವರ್ಷದ ಬಾಲಕಿಯನ್ನು ಕಾಮುಕನೊಬ್ಬ ಅತ್ಯಾಚಾರ ಮಾಡಿ, ಬಾವಿಗೆ ಎಸೆದು ಹೋಗಿರುವ ಘಟನೆ ರಾಜಸ್ಥಾನದ ಭರತ್ಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹಿಂದೂನ್​ ಗ್ರಾಮದ ರಾಜೇಶ್​ ಜತವ್​ (30)ಅತ್ಯಾಚಾರವೆಸಗಿರುವ ಆರೋಪಿ. ಈತ ತನ್ನದೇ ಊರಿನ ಬಾಲಕಿಯ ಮೇಲೆ ಅತ್ಯಾಚಾರಸಗಿದ್ದಾನೆ. ಇತ್ತೀಚೆಗೆ ಬಾಲಕಿ ಮನೆ ಹತ್ತಿರದ ಅಂಗಡಿಯಿಂದ ಏನೋ ಕೊಂಡೋಗಲು ಬಂದಿದ್ದಾನೆ. ಆ ವೇಳೆ ರಾಜೇಶ್​ ಬಾಲಕಿಯನ್ನು ಊರಾಚೆ ಇರುವ ಎಣ್ಣೆ ಮಿಲ್​ನತ್ತ ಹೊತ್ತೊಯ್ದಿದ್ದಾನೆ. ಅಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿ, ಹತ್ತಿರದ ಬಾವಿಯೊಂದಕ್ಕೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.

ಅಂಗಡಿಗೆ ಹೋದ ಮಗಳು ಎಷ್ಟು ಹೊತ್ತಾದರೂ ವಾಪಾಸು ಬರದಿದ್ದನ್ನು ಕಂಡು ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರಿಗೂ ವಿಚಾರ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ರಾಜೇಶ್​, ಬಾಲಕಿಯನ್ನು ಎಣ್ಣೆ ಮಿಲ್​ ಬಳಿ ಹೊತ್ಯೊಯ್ದಿರುವುದು ತಿಳಿದುಬಂದಿದೆ. ತಕ್ಷಣ ಆ ಸ್ಥಳದಲ್ಲಿ ಪರಿಶೀಲನೆ ಆರಂಭಿಸಲಾಗಿದೆ.

ಗ್ರಾಮಸ್ಥರು ಕೂಡ ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಅವರಿಗೆ ಬಾವಿಯಲ್ಲಿ ಬಾಲಕಿಯ ಮೃತ ದೇಹವಿರುವುದು ಕಂಡು ಬಂದಿದೆ. ತಕ್ಷಣ ಆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಎನ್​ಡಿಆರ್​ಎಫ್​ ತಂಡವನ್ನು ಸ್ಥಳಕ್ಕೆ ಕರೆಸಿದ್ದು, ಬಾಲಕಿಯ ದೇಹವನ್ನು ಮೇಲೆತ್ತಲಾಗಿದೆ. ಆಕೆಯ ಮೇಲೆ ಅತ್ಯಾಚಾರವಾಗಿರುವುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ. ಆರೋಪಿ ರಾಜೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಮದುವೆಯಾಗಿ ಮೂರು ಹೆಣ್ಣು ಮಕ್ಕಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net