ಮೊದಲ ಮಳೆಗೆ ಕೃತಕ ನೆರೆ

ಮುಂಗಾರು ಪೂರ್ವ ಮಳೆಯಿಂದ ಮಂಗಳೂರು ನಗರದ ಹಲವೆಡೆ ಮಂಗಳವಾರ ರಾತ್ರಿ ತಗ್ಗು ಪ್ರದೇಶಗಳು, ಫ್ಲೈ ಓವರ್‌ಗಳ ಕೆಳಭಾಗದಲ್ಲಿ ಕೆಲ ಹೊತ್ತು ಕೃತಕ ನೆರೆ ಉಂಟಾಯಿತು.
ಮುಂಗಾರು ಪೂರ್ವ ಮಳೆಯಿಂದ ಮಂಗಳೂರು ನಗರದ ಹಲವೆಡೆ ಮಂಗಳವಾರ ರಾತ್ರಿ ತಗ್ಗು ಪ್ರದೇಶಗಳು, ಫ್ಲೈ ಓವರ್‌ಗಳ ಕೆಳಭಾಗದಲ್ಲಿ ಕೆಲ ಹೊತ್ತು ಕೃತಕ ನೆರೆ ಉಂಟಾಯಿತು.
Published on
ಮಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಪೂರ್ವ ಮಳೆಯಿಂದ ಮಂಗಳೂರು ನಗರದ ಹಲವೆಡೆ ಮಂಗಳವಾರ ರಾತ್ರಿ ತಗ್ಗು ಪ್ರದೇಶಗಳು, ಫ್ಲೈ ಓವರ್‌ಗಳ ಕೆಳಭಾಗದಲ್ಲಿ ಕೆಲ ಹೊತ್ತು ಕೃತಕ ನೆರೆ ಉಂಟಾಯಿತು. ಮಾತ್ರವಲ್ಲದೆ, ನಗರದ ಕೆಲವೆಡೆ ಒಳಚರಂಡಿಗಳು, ಮ್ಯಾನ್‌ಹೋಲ್‌ಗಳಲ್ಲಿ ಮಳೆ ನೀರು ತುಂಬಿ ಹರಿವ ಪ್ರಸಂಗ ಬುಧವಾರವೂ ಮುಂದುವರಿಯಿತು.
ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಸಿಡಿಲು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ನಗರದ ಪಡೀಲ್, ಪಂಪ್‌ವೆಲ್, ಕಾರ್‌ಸ್ಟ್ರೀಟ್ ಸೇರಿದಂತೆ ಸ್ಮಾರ್ಟ್ ರಸ್ತೆಗಳು ಜಲಾವೃತಗೊಂಡವು. ಕೆಲ ಗಂಟೆಗಳಲ್ಲೇ ಫ್ಲೈ ಓವರ್‌ಗಳಡಿ ತುಂಬಿದ್ದ ಮಳೆ ನೀರು ಇಳಿದು ಹೋಯಿತಾದರೂ ಅಲ್ಲಲ್ಲಿ ಮ್ಯಾನ್‌ಹೋಲ್‌ಗಳಲ್ಲಿ ನೀರು ತುಂಬಿದ ಕಾರಣ ಕಾಂಕ್ರೀಟ್ ರಸ್ತೆ ಅಗೆದು ದುರಸ್ತಿ ಕಾರ್ಯ ನಡೆಸುವ ಪ್ರಮೇಯ ಎದುರಾಯಿತು. ಕಂಕನಾಡಿಯಿಂದ ಪಂಪ್‌ವೆಲ್ ಹಾಗೂ ಪಂಪ್‌ವೆಲ್‌ನಿಂದ ಎಕ್ಕೂರು ಹಾಗೂ ಕಂಕನಾಡಿ ಬೈಪಾಸ್ ರಸ್ತೆ (ಪಂಪ್‌ವೆಲ್‌ನಿಂದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಸಾಗುವ ರಸ್ತೆ) ಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದಾಗಿ ತೊಂದರೆ ಉಂಟಾಗಿದೆ. ಸಿಡಿಲು, ಗುಡುಗು, ಮಳೆ ಗಾಳಿಯಿಂದ ಕೆಲವೆಡೆ ಮರ ಹಾಗೂ ಮರದ ಟೊಂಗೆಗಳು ಬಿದ್ದ ಕಾರಣ ವಿದ್ಯುತ್ ವ್ಯತ್ಯಯಕ್ಕೂ ಕಾರಣವಾಯಿತು. ನಗರದ ಹಲವೆಡೆ ರಾತ್ರಿ ಸುಮಾರು 10 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ವಿದ್ಯುತ್ ಸ್ಥಗಿತಗೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net