18 ವರ್ಷದ ಯುವಕನನ್ನು ಕೊಂದು ತಿಂದ ಮೃಗಾಲಯದ ಸಿಂಹ; ಬೋನಿನೊಳಗೆ ಅವಶೇಷವಾಗಿ ಸಿಕ್ಕ ಯುವಕ

lion cage
Published on

ಲಾಹೋರ್​: ಕೆಲ ದಿನಗಳಿಂದ ಕಾಣೆಯಾಗಿದ್ದ ಯುವಕನನ್ನು ಮೃಗಾಲಯದ ಸಿಂಹ ಕೊಂದು ತಿಂದಿರುವ ಘಟನೆ ಲಾಹೋರ್​ನ ಸಫಾರಿ ಪಾರ್ಕ್​ನಲ್ಲಿ ನಡೆದಿದೆ.

ಸೋಮವಾರದಂದು ಮನೆಯಿಂದ ಹೊರನಡೆದ ಬಿಲಾಲ್​ (18) ನೇರವಾಗಿ ಸಫಾರಿ ಪಾರ್ಕ್​ನತ್ತ ಹೋಗಿದ್ದ. ಬೇಲಿ ಹಾರಿ ಸಫಾರಿ ಪಾರ್ಕ್​ನೊಳಗೆ ಹೋದ ಯುವಕ ಅಲ್ಲಿದ್ದ ಹುಲ್ಲನ್ನು ಕೊಯ್ಯಲು ಮುಂದಾಗಿದ್ದಾನೆ. ಅದೇ ಸಮಯಕ್ಕೆ ಮೃಗಾಲಯದ ಸಿಂಹವು ಆತನ ಮೇಲೆ ಎಗರಿದ್ದು, ಯುವಕನನ್ನು ಕೊಂದಿದೆ.

ಬಿಲಾಲ್​ನ ಕುಟುಂಬಸ್ಥರು ಆತನಿಗಾಗಿ ಸತತ ಹುಡುಕಾಟ ನಡೆಸಿದ್ದಾರೆ. ಆತನ ಚಿಕ್ಕಪ್ಪ ಒಬ್ಬರು ಮೃಗಾಲಯದದಲ್ಲಿ ಕೆಲಸ ಮಾಡುತ್ತಿದ್ದರಿಂದಾಗಿ ಅವರು ಮೃಗಾಲಯದ ಆಡಳಿತವನ್ನೂ ಸಹ ಸಂಪರ್ಕಿಸಿದ್ದಾರೆ. ಅವರ ಕೋರಿಕೆಯ ಮೇರೆಗೆ ಮೃಗಾಲಯದಲ್ಲಿ ಪರಿಶೀಲಿಸಿದಾಗ ಸಿಂಹದ ಬೋನಿನೊಳಗೆ ಯುವಕನ ಅವಶೇಷಗಳಿರುವುದು ಪತ್ತೆಯಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಕುಡಗೋಲು ಮತ್ತು ಹುಲ್ಲು ಸಹ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net