ವಿದ್ಯುತ್ ತಂತಿ ತಾಗಿ ನರಳಾಡುತ್ತಿದ್ದ ಅಜ್ಜನ ಜೀವ ರಕ್ಷಿಸಿದ 11ರ ಬಾಲಕ

05-klg 1 AJJA MOMMAGA
Published on

ಕಲಘಟಗಿ: ತಾಲೂಕಿನ ಹನಮಾಪುರ ಗ್ರಾಮದಲ್ಲಿ ವಿದ್ಯುತ್ ತಂತಿ ರ್ಸ³ಸಿ ನರಳಾಡುತ್ತಿದ್ದ ಹಿರಿಯಜ್ಜನನ್ನು ಹನ್ನೊಂದು ವರ್ಷದ ಬಾಲಕನೊಬ್ಬ ರಕ್ಷಿಸಿ ಸಮಯ ಪ್ರಜ್ಞೆ ಮೆರೆದಿದ್ದಾನೆ.
ಪಟ್ಟಣದ ಜನತಾ ಇಂಗ್ಲಿಷ್ ಪ್ರೌಢಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮಹ್ಮದಶಮಿ ಮೌಲಾಸಾಬ್ ಬುಕಿಟಗಾರ ಸಾಹಸ ಪ್ರದರ್ಶಿಸಿದ ಬಾಲಕ.
ಮೂರು ದಿನಗಳ ಹಿಂದೆ ಹನಮಾಪುರ ಗ್ರಾಮ ಸನಿಹದ ಬೇಡ್ತಿ ಹಳ್ಳದ ಸಮೀಪಕ್ಕೆ ತನ್ನ ಹಿರಿಯಜ್ಜ ಮಹ್ಮದಅಲಿ ಜತೆ ಬಾಲಕ ಮಹ್ಮದಶಮಿ ಮೀನು ಹಿಡಿಯಲು ಹೋಗಿದ್ದ. ಹೊಲವೊಂದರಲ್ಲಿ ಕೊಳವೆಬಾವಿ ಸಂರ್ಪಸುವ ವಿದ್ಯುತ್ ತಂತಿ ಭೂಮಿಗೆ ತಾಗಿದ್ದು, ಅದನ್ನು ಗಮನಿಸದ ಮಹ್ಮದಅಲಿ ತಂತಿ ಮೇಲೆ ಕಾಲಿಟ್ಟಿದ್ದರಿಂದ ವಿದ್ಯುತ್ ತಂತಿ ತಗುಲಿ ಪ್ರಾಣಾಪಾಯಕ್ಕೆ ಸಿಲುಕಿದ್ದ. ಇದನ್ನು ಗಮನಿಸಿದ ಬಾಲಕ ತನ್ನ ಕೈಯಲ್ಲಿದ್ದ ಕೊಡೆಯ ಪ್ಲಾಸ್ಟಿಕ್ ಹಿಡಿಕಿಯನ್ನು ಮುಂದೆ ಮಾಡಿ ತಂತಿ ಎಳೆದು ಅಜ್ಜನ ಜೀವ ರಕ್ಷಿಸಿದ್ದಾನೆ.
ಅಜ್ಜನ ಜೀವ ರಕ್ಷಿಸಿದ ಬಾಲಕನಿಗೆ ಶನಿವಾರ ಪಟ್ಟಣದ ಜನತಾ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯುತ್ ಸ್ವರ್ಶದಿಂದ ನನ್ನ ಅಂಗೈಗೆ ಗಾಯವಾಗಿ ಪ್ರಜ್ಞಾಹೀನನಾಗಿದ್ದೆ. ನನ್ನ ಮೊಮ್ಮಗ ನೀರು ಕುಡಿಸಿ ಆರೈಕೆ ಮಾಡಿದ ಮೇಲೆಯೇ ನಾನು ಬದುಕಿರುವ ಬಗ್ಗೆ ಅರಿವಾಯಿತು.| ಮಹ್ಮದಅಲಿ, ಬಾಲಕನ ಅಜ್ಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net