ಅಮೃತಬಿಂದು- ಶ್ರೀ ಶೈವಾಗಮ: ಗಣಾಚಾರಕ್ಕೆ ಸಂಬಂಧಿಸಿದ ಅರವತ್ನಾಲ್ಕು ಶೀಲಗಳನ್ನು ಅಳವಡಿಸಿಕೊಂಡ ಸಾಧಕಶ್ರೇಷ್ಠನು ಶಿವಸ್ವರೂಪನೇ ಆಗುತ್ತಾನೆ

Sudina-7-Amrutabindu
Published on

ಯಶ್ಚತುಃಷಷ್ಟಿಶಿಲಾಢ್ಯಃ ಶಿವ ಏವ ನ ಸಂಶಯಃ | ಏತದಭ್ಯಾಸಯೋಗೇನ ಶಿವಸಾಯುಜ್ಯಮಶ್ನುತೇ ||

ಗಣಾಚಾರಕ್ಕೆ ಸಂಬಂಧಿಸಿದ ಅರವತ್ನಾಲ್ಕು ಶೀಲಗಳನ್ನು ಅಳವಡಿಸಿಕೊಂಡ ಸಾಧಕಶ್ರೇಷ್ಠನು ಶಿವಸ್ವರೂಪನೇ ಆಗುತ್ತಾನೆ.

ಇದರಲ್ಲಿ ಯಾವ ಸಂಶಯವೂ ಇಲ್ಲ. ಈ ಶೀಲಗಳನ್ನು ಅಭ್ಯಾಸಯೋಗದ ಮೂಲಕ ಕ್ರಮವಾಗಿ ಅಳವಡಿಸಿಕೊಳ್ಳಬೇಕು. ಅದರಿಂದ ಶಿವಸಾಯುಜ್ಯ ಪ್ರಾಪ್ತವಾಗುತ್ತದೆ. ಈ ಶೀಲಗಳು ವ್ಯಕ್ತಿಯ ದೈನಂದಿನ ವ್ಯವಹಾರಗಳಿಗೆ ದೇಹದಿಂದ, ಮಾತುಗಳಿಂದ, ಮನಸ್ಸಿನಿಂದ ಮಾಡುವ ಲೌಕಿಕ ಮತ್ತು ಪಾರಮಾರ್ಥಿಕವಾದ ಎಲ್ಲ ಆಚಾರ -ವಿಚಾರಗಳಿಗೆ ಧಾರ್ವಿುಕ ಮತ್ತು ಆಧ್ಯಾತ್ಮಿಕ ಸ್ಪರ್ಶ ಕೊಡುವುದರ ಮೂಲಕ ಜೀವಿಯನ್ನು ಭಾವನಾತ್ಮಕವಾಗಿ ಶಿವನ ಸಮೀಪ ಕರೆದುಕೊಂಡು ಹೋಗುತ್ತವೆ.

| ಚಂದ್ರಜ್ಞಾನಾಗಮ (9.123) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net