ಅಮೃತಬಿಂದು: ಶಿವಲಿಂಗದ ಪೂಜೆಗಿಂತ ಶ್ರೇಷ್ಠವಾದ ಯಾವುದೇ ಕರ್ಮವಿಲ್ಲ

pooja
Published on
ನಾನ್ಯತ್ ಕರ್ಮ ನ ವೈ ಕಾರ್ಯಂ ವ್ರತಮೇ ತನ್ ಮಹಚ್ಛಿವೇ|

ಏಕಸ್ಯ ದ್ರೋಣಪುಷ್ಪಸ್ಯ ಫಲಂ ಮಯ್ಯರ್ಪಿಯಸ್ಯ ತತ್||

ವಕ್ಷ್ಯಾಮಿ ಶೃಣು ದೇವೇಶಿ ತದ್ ದ್ವಾರೇ ಕಿಂಕರೋಸ್ಮ್ಯಹಂ||

ಯದ್ ದ್ರೋಣ ಕುಸುಮೈಃ ಪೂಜಾ ಮಮ ಸನ್ನಿಧಿಕಾರಣಂ ||

ಶಿವಲಿಂಗ ದೀಕ್ಷೆಯನ್ನು ಪಡೆದುಕೊಂಡ ಸಾಧಕನಿಗೆ ಶಿವಲಿಂಗದ ಪೂಜೆಗಿಂತ ಶ್ರೇಷ್ಠವಾದ ಯಾವುದೇ ಕರ್ಮವಿಲ್ಲ ಮತ್ತು ಶಿವಲಿಂಗದ ಪೂಜೆ ಯನ್ನು ಭಕ್ತಿಯಿಂದ ಮಾಡುವವನಿಗೆ ಇತರ ಯಾವುದೇ ಕರ್ಮವನ್ನು ಮಾಡಬೇಕೆಂಬ ಅವಶ್ಯಕತೆ ಕೂಡ ಇರುವುದಿಲ್ಲ. ಈ ಲಿಂಗಪೂಜಾ ವ್ರತಾಚರಣೆಯು ಸ್ವಯಂ ಶ್ರೇಷ್ಠವಾದುದು. ಶಿವಲಿಂಗದ ಈ ಪೂಜೆಯಲ್ಲಿ ಭಕ್ತಿಯಿಂದ ಒಂದು ದ್ರೋಣ ಪುಷ್ಪ ಅರ್ಪಿಸಿದರೆ ಎಂತಹ ಶ್ರೇಷ್ಠ ಫಲವು ದೊರೆಯುತ್ತದೆ ಎಂದರೆ, ಭಕ್ತ ಪರಾಧೀನನಾದ ಶಿವನು ಇಂತಹ ಸಾಧಕನ ಮನೆಬಾಗಿಲಲ್ಲಿ ಸೇವಕನಾಗಿ ನಿಲ್ಲುತ್ತಾನೆ. ಏಕೆಂದರೆ ದ್ರೋಣ ಪುಷ್ಪದಿಂದ ಮಾಡಿದ ಪೂಜೆಯ ಫಲವು ಶಿವನ ಸಾಮೀಪ್ಯ ಲಭಿಸಲು ಕಾರಣವಾಗು ತ್ತದೆ. ಆದ್ದರಿಂದ ನಿಷ್ಠೆಯಿಂದ ನಿತ್ಯವೂ ಆ ಶಿವಲಿಂಗವನ್ನು ಪೂಜಿಸಬೇಕು.

| ಪಾರಮೇಶ್ವರಾಗಮ (5. 43-44 )/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು

| ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net