

ಶ್ರೀ ಶೈವಾಗಮ
ಕಂಥಾಕಮಂಡಲುಧರೋ ಭೂತಿರುದ್ರಾಕ್ಷಸಂಯುತಃ | ದಂಡಕೌಪೀನಧಾರೀ ಚ ನಿರಾಭಾರೀತಿ ಗೀಯತೇ ||
ಇಲ್ಲಿ ನಿರಾಭಾರೀ ವೀರಶೈವನ ವೇಷಭೂಷಣಗಳ ಕುರಿತು ಹೇಳಲಾಗಿದೆ. ಕೈಯಲ್ಲಿ ಜೋಳಿಗೆ ಮತ್ತು ಕಮಂಡಲುಗಳನ್ನು ಧರಿಸಿದವನು, ದೇಹದಲ್ಲಿ ವಿಭೂತಿ ಮತ್ತು ರುದ್ರಾಕ್ಷಗಳನ್ನು ಧರಿಸಿಕೊಂಡವನು ಹಾಗೂ ದಂಡ ಮತ್ತು ಕೌಪೀನಗಳನ್ನು ಹೊಂದಿದವನು ನಿರಾಭಾರಿ ಎಂದು ಕರೆಯಲ್ಪಡುತ್ತಾನೆ. ಸಾಮಾನ್ಯವಾಗಿ ಸಮಾಜದಲ್ಲಿ ಅವರವರ ವೇಷಭೂಷಣಗಳನ್ನು ಗಮನಿಸಿ ಅವರ ಸ್ಥಾನ, ಮಾನ, ವ್ಯಕ್ತಿತ್ವವನ್ನು ಅಳೆಯುವ ಸ್ವಭಾವ ಇರುವುದರಿಂದ ವಸ್ತುತಃ ನಿರಾಭಾರಿಯಾದವನಿಗೆ ವೈಯಕ್ತಿಕ ಇವುಗಳ ಅವಶ್ಯಕತೆ ಇಲ್ಲದಿದ್ದರೂ ಆ ಸಾಮಾಜಿಕ ವ್ಯವಸ್ಥೆ ಮತ್ತು ಜನರ ಮನಃಸ್ಥಿತಿಯ ಸಲುವಾಗಿ ಈ ವೇಷಭೂಷಣಗಳನ್ನು ಅಳವಡಿಸಿಕೊಂಡಿರಬೇಕಾಗುತ್ತದೆ.
| ಚಂದ್ರಜ್ಞಾನಾಗಮ (10.46) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು