ಅಮೃತಬಿಂದು: ಧರ್ಮದ ವಿಶೇಷ ಆಚರಣೆಗಳನ್ನು ಅನುಷ್ಠಾನ ಮಾಡುವ ವೀರಶೈವ ಶಿವಭಕ್ತ ‘ವಿಶೇಷ ವೀರಶೈವ'

Sudina-7-Amrutabindu
Published on
ಶ್ರೀ ಶೈವಾಗಮ

ವಿಶೇಷಧರ್ವನುಷ್ಠಾನಾತ್ ವಿಶೇಷಶ್ಚ ಸ ಏವ ಹಿ | ಏಕಂ ಮಾಹೇಶ್ವರಂ ವಾ ಪಿ  ದ್ವೌವಾ ತ್ರೀನ್ ಪ್ರತಿವಾಸರಮ್ || ಭೋಜಯಿತ್ವಾ ತತ್ ಶೇಷಂ ಭುಂಜೀಯಾದಪ್ರಮಾದತಃ | ಷಟ್ಕಾಲಂ ಲಿಂಗಪೂಜಾ ತು ನಿಯತೈಸ್ತು ಪದಾರ್ಥಕೈಃ ||

ಧರ್ಮದ ವಿಶೇಷ ಆಚರಣೆಗಳನ್ನು ಅನುಷ್ಠಾನ ಮಾಡುವ ವೀರಶೈವ ಶಿವಭಕ್ತನು ‘ವಿಶೇಷ ವೀರಶೈವ’ನೆಂದು ಕರೆಯಲ್ಪಡುತ್ತಾನೆ. ಆ ವಿಶೇಷ ಆಚರಣೆಗಳು ಯಾವುವೆಂದರೆ - ವಾರದಲ್ಲಿ ತನಗೆ ಅನುಕೂಲವಾಗುವ ಒಂದು ದಿನವನ್ನು ನಿಗದಿಪಡಿಸಿಕೊಂಡು ಒಬ್ಬರು, ಇಬ್ಬರು ಅಥವಾ ಮೂವರು ಮಾಹೇಶ್ವರರನ್ನು ಮನೆಗೆ ಕರೆದು ಊಟ ಮಾಡಿಸಿ ಅವರ ಶೇಷಪ್ರಸಾದವನ್ನು ತಪ್ಪದೆ ಸ್ವೀಕರಿಸುವುದು. ವ್ಯತ್ಯಯವಾಗದಂತೆ ನಿಗದಿತ ಪದಾರ್ಥಗಳನ್ನು ಅರ್ಪಿಸಿ ಆರು ಹೊತ್ತು ತಪ್ಪದೆ ಲಿಂಗಪೂಜೆ ಮಾಡುವುದು.

| ಚಂದ್ರಜ್ಞಾನಾಗಮ (10.38) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net