ಅಮೃತಬಿಂದು

Sudina-7-Amrutabindu
Published on

ಶ್ರೀ ಶೈವಾಗಮ

ಗುರೋರಪೀಷ್ಟಲಿಂಗಸ್ಯ ಪೂಜಾರ್ಥಂ ಸ್ಥಿರಮಾಸನಂ | ತತ್ ಷೋಡಶಕಮಿತ್ಯುಕ್ತಂ ದೇವದೇವೇನ ಶೂಲಿನಾ ||

ಗುರು ಮತ್ತು ಇಷ್ಟಲಿಂಗದ ಪೂಜೆಗಾಗಿ ಸ್ಥಿರಾಸನದಲ್ಲಿ ಕುಳಿತುಕೊಳ್ಳುವುದು ಹದಿನಾರನೆಯ ಶೀಲವೆಂದು ತ್ರಿಶೂಲಧಾರಿಯೂ ದೇವಾಧಿದೇವನೂ ಆದ ಶಿವನು ಹೇಳಿದ್ದಾನೆ. ಸುಖಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದವುಗಳಲ್ಲಿ ಪೂಜೆ ಪೂರ್ಣಗೊಳ್ಳುವವರೆಗೆ ಕುಳಿತುಕೊಳ್ಳಲು ಸಾಧ್ಯವಾಗುವ ಆಸನದಲ್ಲಿ ಕುಳಿತುಕೊಳ್ಳುವುದು, ಅಧಿಕ ಸಮಯದವರೆಗೆ ಒಂದೇ ಆಸನದಲ್ಲಿ ಕುಳಿತಾಗ ಕಾಲುಗಳಲ್ಲಿ ನೋವು ಕಾಣಿಸಿಕೊಂಡರೂ ವಿಚಲಿತರಾಗದೆ ಸಹಿಸಿಕೊಳ್ಳುವುದು ಇವೆಲ್ಲ ಈ ಶೀಲದ ಭಾಗ. ಹದಿಮೂರರಿಂದ ಹದಿನಾರರವರೆಗಿನ ಶೀಲಗಳು ಪಾದಕ್ಕೆ ಸಂಬಂಧಿಸಿದೆ.

| ಚಂದ್ರಜ್ಞಾನಾಗಮ (9.70 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net