

ವೀರಶೈವಂ ಪ್ರವಕ್ಷ್ಯಾಮಿ ವಿದಿತಂ ಶ್ರುತಿತಂತ್ರಯೋಃ | ಶ್ರೌತಂ ಸ್ವತಂತ್ರಮಿತಿ ಚ ದ್ವಿವಿಧಂ ಪರಿಕೀರ್ತಿತಮ್ || ವರ್ಣಾಶ್ರಮೀಯಧರ್ವಢ್ಯಂ ಶ್ರೌತಮಿತ್ಯಭಿಧೀಯತೇ | ತದೀಯಧರ್ಮರಹಿತಂ ಸ್ವತಂತ್ರಮಿತಿ ಕಥ್ಯತೇ ||
ವೀರಶೈವಕ್ಕೆ ಸಂಬಂಧಿಸಿದ ವಿಚಾರಗಳು ವೇದ ಹಾಗೂ ಆಗಮಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ಶ್ರೌತ-ಸ್ವತಂತ್ರ ಎಂದು ವೀರಶೈವವು ಎರಡು ಪ್ರಕಾರ. ವರ್ಣ-ಆಶ್ರಮಧರ್ಮದ ಆಚರಣೆಗಳಿಂದ ಕೂಡಿದ್ದು ಶ್ರೌತ. ಈ ಆಚರಣೆಗಳಿಲ್ಲದ್ದು ಸ್ವತಂತ್ರ. ವರ್ಣಾಶ್ರಮಧರ್ಮದ ಆಚರಣೆಗಳು ಅವರವರ ವಿಶ್ವಾಸವನ್ನು ಅವಲಂಬಿಸಿವೆ. ಅವುಗಳ ಮೇಲೆ ವಿಶ್ವಾಸ ಇರುವವರು, ಇಲ್ಲದಿರುವವರು ಇಬ್ಬರೂ ವೀರಶೈವರೇ ಎಂಬುದು ಗಮನಾರ್ಹ. ಕ್ಯಾಥಲಿಕ್-ಪ್ರೊಟೆಸ್ಟೆಂಟ್ ಇಬ್ಬರೂ ಕ್ರಿಶ್ಚಿಯನ್ನರೇ. ಶ್ವೇತಾಂಬರ-ದಿಗಂಬರ ಇಬ್ಬರೂ ಜೈನರೇ. ಇದರಂತೆ ಶ್ರೌತ-ಸ್ವತಂತ್ರ ಇಬ್ಬರೂ ವೀರಶೈವರೇ.
| ಚಂದ್ರಜ್ಞಾನಾಗಮ (10.30-31)
| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು