ಅಮೃತ ಬಿಂದು, ಶ್ರೀ ಶೈವಾಗಮ; ಸಂನ್ಯಾಸಾಶ್ರಮದಲ್ಲಿರುವವನು ನಿರಾಭಾರಿ

Sudina-7-Amrutabindu
Published on

ತುರೀಯಾಶ್ರಮಸೇವೀ ತು ನಿರಾಭಾರೀತಿ ಚೋಚ್ಯತೇ | ಸ್ವತಂತ್ರೋ ತ್ಯಕ್ತದಾರಾದಿರ್ನಿರಾಭಾರೀತಿ ಕಥ್ಯತೇ ||

ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ಎಂಬ ನಾಲ್ಕು ಆಶ್ರಮಗಳಲ್ಲಿ ನಾಲ್ಕನೆಯ ಸಂನ್ಯಾಸಾಶ್ರಮದಲ್ಲಿರುವವನು ನಿರಾಭಾರಿ ಎಂದು ಕರೆಯಲ್ಪಡುತ್ತಾನೆ. ಯಾರ ಅಧೀನದಲ್ಲೂ ಇರದೆ ಸದಾ ಸರ್ವಸ್ವತಂತ್ರನಾಗಿರುವ ಇವನು ಸತಿ-ಸುತಾದಿಗಳನ್ನು ಪರಿತ್ಯಾಗ ಮಾಡಿರುವುದರಿಂದ ನಿರಾಭಾರಿ ವೀರಶೈವನೆಂದು ಹೇಳಲ್ಪಡುತ್ತಾನೆ. ಇವನು ಎಲ್ಲ ಪ್ರಾಪಂಚಿಕ ವ್ಯವಹಾರಗಳಿಂದ ನಿರ್ಲಿಪ್ತನಾಗಿರುವುದರಿಂದ ಕೇವಲ ಪ್ರಾರಬ್ಧ ಕರ್ಮಕ್ಕನುಗುಣವಾಗಿ ಕ್ರಿಯೆಗಳು ನಡೆಯುತ್ತಿರುತ್ತವೆ. ಆದರೆ ಲೋಕಸಂಗ್ರಹ ದೃಷ್ಟಿಯಿಂದ ಧಾರ್ವಿುಕ ಆಚರಣೆಗಳು ಅವನಿಂದ ಜರುಗುತ್ತಿರುತ್ತವೆ.

| ಚಂದ್ರಜ್ಞಾನಾಗಮ (10.42) 

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net