

ಇಷ್ಟಲಿಂಗಾದಿತ್ರಿತಯಸ್ಸೈಕೀಭಾವೇನ ಚಾರ್ಚನಂ | ಗುರೌ ಮಾಹೇಶ್ವರೇ ಸ್ವೇಷ್ಟಲಿಂಗೇ ಚ ಸಮಭಾವನಾ ||
ತ್ರಿಕಾಲಂ ಲಿಂಗಪೂಜಾ ಚ ಸಂಭವದ್ಭಿಃ ಪದಾರ್ಥಕೈಃ | ಸಾಮಾನ್ಯವೀರಶೈವಸ್ಯ ಧಮೊರ್ೕಯಂ ಪರಿಕೀರ್ತಿತಃ ||
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳಲ್ಲಿ ವ್ಯತ್ಯಾಸ ಮಾಡದೆ ಒಂದೇ ಎಂಬ ಭಾವದಿಂದ ಅವುಗಳನ್ನು ಪೂಜಿಸುವುದು ಮತ್ತು ಅನುಸಂಧಾನ ಮಾಡುವುದು; ಗುರುಗಳಲ್ಲಿ, ಜಂಗಮರಲ್ಲಿ, ಇಷ್ಟಲಿಂಗದಲ್ಲಿ ಸಮಾನ ಭಕ್ತಿ-ಗೌರವ ಭಾವನೆಯನ್ನು ಇರಿಸುವುದು; ಮುಂಜಾನೆ, ಮಧ್ಯಾಹ್ನ, ಸಾಯಂಕಾಲ ಹೀಗೆ ಮೂರು ಕಾಲ ಉಪಲಬ್ಧವಿರುವ ಪದಾರ್ಥಗಳಿಂದ ಲಿಂಗಪೂಜೆ ಮಾಡುವುದು - ಇವು ಸಾಮಾನ್ಯ ವೀರಶೈವನ ಆಚರಣೆಗಳು. ವೀರಶೈವರೆಂದು ಕರೆಯಲ್ಪಡುವವರೆಲ್ಲ ಕನಿಷ್ಠಪಕ್ಷ ಇಷ್ಟನ್ನಾದರೂ ಆಚರಿಸಬೇಕು.
| ಚಂದ್ರಜ್ಞಾನಾಗಮ (10.36-37)
|ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು