

ತತೋ ದಂತಾನ್ ಧಾವಯೇಚ್ಚ ಕ್ಷೀರಿಕಂಟಕಿಶಾಖಯಾ | ಅಲಾಭೇ ದಂತಕಾಷ್ಠಾನಾಂ ಸದಾಚಾರಸಮನ್ವಿತಃ || ಅಪಾಂ ದ್ವಾದಶಗಂಡೂಷೈಃ ಕುರ್ಯಾದಾಸ್ಯವಿಶೋಧನಂ | ಆಚಮ್ಯ ಚಾಥ ನದ್ಯಾದೌ ವಾರುಣಸ್ನಾನಮಾಚರೇತ್ ||
ಶಾಸ್ತ್ರವಿಧಾನದಂತೆ ಶೌಚವಿಧಿಯನ್ನು ಪೂರ್ಣಗೊಳಿಸಿದ ನಂತರ ಹಾಲುಳ್ಳ ಅಥವಾ ಮುಳ್ಳುಗಳಿಂದ ಕೂಡಿದ ವೃಕ್ಷದ ಶಾಖೆಯ ಕಡ್ಡಿಯಿಂದ ಹಲ್ಲುಜ್ಜಿ ತೊಳೆದುಕೊಳ್ಳಬೇಕು. ಒಂದುವೇಳೆ ಇಂಥ ಹಲ್ಲುಕಡ್ಡಿಗಳು ದೊರೆಯದಿದ್ದರೆ ಸದಾಚಾರಸಂಪನ್ನ ಸಾಧಕನು ನೀರಿನಿಂದ 12 ಬಾರಿ ಮುಕ್ಕಳಿಸುವ ಮೂಲಕ ಬಾಯಿಯನ್ನು ಶುದ್ಧಗೊಳಿಸಿಕೊಳ್ಳಬೇಕು. ನಂತರ ಆಚಮನ ಮಾಡಿ ನದಿ ಮೊದಲಾದವುಗಳಲ್ಲಿ ಜಲಸ್ನಾನ ಮಾಡಬೇಕು. ವನಸ್ಪತಿಗಳಲ್ಲಿ ಅದ್ಭುತ ಶಕ್ತಿ ಅಡಕವಾಗಿರುತ್ತವೆ. ನಾಲಿಗೆ, ಹಲ್ಲು ಮೊದಲಾದವುಗಳಿಗೆ ಸ್ಪರ್ಶಮಾತ್ರದಿಂದಲೂ ಅನೇಕ ಶಾರೀರಿಕ, ಮಾನಸಿಕ ಲಾಭಗಳುಂಟಾಗುತ್ತವೆ. ಆದ್ದರಿಂದ ಉತ್ತಮ ವನಸ್ಪತಿಗಳಿಂದ ಹಲ್ಲುಜ್ಜಿಕೊಳ್ಳುವುದು ಲಾಭಕರ.
| ಚಂದ್ರಜ್ಞಾನಾಗಮ (11.5-6) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು