ಅಮೃತ ಬಿಂದು, ಶ್ರೀ ಶೈವಾಗಮ; ನಿಯಮವನ್ನು ಪಾಲಿಸುವವನು ವಿಶೇಷ ವೀರಶೈವ

Sudina-7-Amrutabindu
Published on

ದ್ರೋಣಪುಷ್ಪಂ ಬಿಲ್ವಪತ್ರಂ ಕರವೀರಮಥಾಪಿ ವಾ | ಮಲ್ಲಕೋತ್ಪಲಪುನ್ನಾಗಜಾತ್ಯಾದಿಕುಸುಮಾನಿ ವಾ ||

ಏಷ್ವೇಕಂ ತ್ರೀಣಿ ದ್ವೌ ವಾಪಿ ಹ್ರಪಯೇನ್ನಿಯಮಾನ್ವಿತಃ | ಏವಂ ಚರಿಷ್ಯೇ ನಿಯಮಾನಹಮಾಪ್ರಾಣಸಂಚರಾತ್ ||

ಇಲ್ಲಿ ವಿಶೇಷ ವೀರಶೈವನ ಪೂಜಾವೈಶಿಷ್ಟ್ಯನ್ನು ಕುರಿತು ಹೇಳಲಾಗಿದೆ. ತುಂಬೆ, ಬಿಲ್ವ, ಕಣಗಿಲೆ, ಮಲ್ಲಿಗೆ, ನೈದಿಲೆ, ಪುನ್ನಾಗ, ಜಾಜಿ ಮೊದಲಾದ ಹೂವುಗಳಲ್ಲಿ ಯಾವುದಾದರೂ ಒಂದು, ಎರಡು ಅಥವಾ ಮೂರನ್ನು ನಿಯಮಾನುಸಾರ ಅರ್ಪಿಸಿ ಪೂಜಿಸಬೇಕು.

ದೇಹದಲ್ಲಿ ಪ್ರಾಣಸಂಚಾರ ಇರುವವರೆಗೆ ತಪ್ಪದೆ ಈ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತೇನೆ, ಇಲ್ಲವಾದರೆ ಪ್ರಾಣವನ್ನೇ ಧರಿಸುವುದಿಲ್ಲ ಎಂಬ ನಿಯಮವನ್ನು ಪಾಲಿಸುವವನು ವಿಶೇಷ ವೀರಶೈವನಾಗುತ್ತಾನೆ. ಸ್ವಭಾವತಃ ಆಲಸಿಯಾಗಿರುವ ಮನಸ್ಸನ್ನು ಸದಾ ಉತ್ತಮ ಕಾರ್ಯಗಳಲ್ಲಿ ತೊಡಗಿಸಲು ದೃಢ ನಿಯಮಗಳು ಆವಶ್ಯಕ.

| ಚಂದ್ರಜ್ಞಾನಾಗಮ (10.39-40) 

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net