

ಪುನಶ್ಚ ತ್ರಿವಿಧಮೇತದ್ಧಿ ಸಾಮಾನ್ಯಾದಿಭೇದತಃ | ಸಾಮಾನ್ಯಶ್ಚ ವಿಶೇಷಶ್ಚ ನಿರಾಭಾರೀತಿ ಚ ತ್ರಿಧಾ ||
ವೀರಶೈವದಲ್ಲಿ ಶ್ರೌತ-ಸ್ವತಂತ್ರ ಎಂಬ ಎರಡು ಭೇದಗಳಲ್ಲದೆ ಪುನಃ ಸಾಮಾನ್ಯ, ವಿಶೇಷ, ನಿರಾಭಾರಿ ಎಂಬ ಮೂರು ಭೇದಗಳುಂಟು. ಶ್ರೌತ-ಸ್ವತಂತ್ರ ಎಂಬ ಭೇದಗಳು ವೀರಶೈವ ಶಿವಭಕ್ತನಲ್ಲಿರುವ ವರ್ಣಾಶ್ರಮಧರ್ಮಗಳ ಮೇಲಿನ ವಿಶ್ವಾಸವನ್ನು ಅವಲಂಬಿಸಿರುತ್ತವೆ.
ಆದರೆ ಈ ಸಾಮಾನ್ಯ ಮೊದಲಾದ ಭೇದಗಳು ಲಿಂಗಪೂಜೆ ಜಂಗಮಾರಾಧನೆ ಮುಂತಾದ ಧಾರ್ವಿುಕ ವ್ರತ ಹಾಗೂ ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದ ಆಚರಣೆಗಳನ್ನು ಅವಲಂಬಿಸಿವೆ.
| ಚಂದ್ರಜ್ಞಾನಾಗಮ (10.35)
| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು