

ದೇಶಿಕಾಯ ತನುಂ ಚಿತ್ತಂ ಶಂಭವೇ ಚ ಧನಂ ತಥಾ | ಜಂಗಮಾಯ ಸಮಪ್ಯೆ ೖವಂ ಮಹೋತ್ಸಾಹಸಮನ್ವಿತಃ ||
ಮುಕ್ತಿಮೇವ ಪರಾಂ ಕಾಂಕ್ಷಮಾಣೋ ಯದವತಿಷ್ಠತೇ | ತನ್ಮತಂ ವೀರಭೃತ್ಯತ್ವಂ ಶಿವಾನುಗ್ರಹಸಾಧನಮ್ ||
ಗುರುವಿಗೆ ತನುವನ್ನು, ಶಿವ ಅಥವಾ ಅವನ ಸ್ವರೂಪವಾದ ಲಿಂಗಕ್ಕೆ ತನ್ನ ಮನಸ್ಸನ್ನು ಮತ್ತು ಜಂಗಮಕ್ಕೆ ಧನವನ್ನು ಸಮರ್ಪಿಸಿದ ಬಳಿಕ ಅತ್ಯಂತ ಉತ್ಸಾಹಭರಿತನಾಗಿ ಪರಮ ಶ್ರೇಷ್ಠ ಮುಕ್ತಿಯನ್ನೇ ಅಪೇಕ್ಷಿಸುತ್ತ ನಿಲ್ಲುವುದು ಶಿವಾನುಗ್ರಹಕ್ಕೆ ಸಾಧನವಾದ ವೀರಭೃತ್ಯತ್ವವೆಂದು ಕರೆಯಲ್ಪಡುತ್ತದೆ. ತನುವನ್ನು ಅರ್ಪಿಸಿದಾಗ ಗುರುವು ಅದಕ್ಕೆ ದೀಕ್ಷೆ ಮೊದಲಾದ ಸಂಸ್ಕಾರ ನೀಡಿ ಉದ್ಧರಿಸುತ್ತಾನೆ. ಶಿವನಿಗೆ ಮನಸ್ಸು ನೀಡಿದಾಗ ಅದರಲ್ಲಿನ ಸಾಂಸಾರಿಕ ವಾಸನೆಗಳು ದೂರಾಗಿ ಶಿವಮಯವಾಗುತ್ತದೆ. ಜಂಗಮಕ್ಕೆ ಧನವನ್ನು ಸಮರ್ಪಿಸಿದಾಗ ಅದು ಅವನ ಮೂಲಕ ಸಮಾಜಕ್ಕೆ ಸದ್ವಿನಿಯೋಗವಾಗುತ್ತದೆ.
| ಚಂದ್ರಜ್ಞಾನಾಗಮ (9.125-126) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು