ಶ್ರೀ ಶೈವಾಗಮ; ಅಮೃತ ಬಿಂದು

Sudina-7-Amrutabindu
Published on

ಅರ್ಚನಂ ಮಾನಸಂ ಯತ್ ಸ್ಯಾತ್ ಶಂಭೋರಾವಾಹನಾದಿನಾ |

ಶೀಲಂ ತ್ವಿದಂ ಗೀಷ್ಪತೇ ತ್ರಿಪಂಚಾಶತ್ಕಮುದಾಹೃತಮ್ || 

ಆವಾಹನ ಮುಂತಾದವುಗಳ ಮೂಲಕ ಶಿವನನ್ನು ಮಾನಸಿಕವಾಗಿ ಬರಮಾಡಿಕೊಂಡು ಮನದಲ್ಲಿಯೇ ಪೂಜಿಸುವುದು ಐವತ್ಮೂರನೆಯ ಶೀಲ. ಬಹಿರಂಗದಲ್ಲಿ ಶಿವಪೂಜೆ ಮಾಡಲು ನೀರು, ಭಸ್ಮ, ಗಂಧ, ಪತ್ರೆ, ಹೂ ಮುಂತಾದ ಅನೇಕ ಭೌತಿಕ ಸಾಮಗ್ರಿಗಳು ಬೇಕು. ಆದರೆ ಮಾನಸಿಕ ಪೂಜೆ ಸಲ್ಲಿಸಲು ಹೊರಗಿನ ಯಾವ ಪದಾರ್ಥಗಳನ್ನೂ ಒಳಗೆ ಒಯ್ಯಲು ಬರುವುದಿಲ್ಲ. ಆದ್ದರಿಂದ ಕ್ಷಮೆ, ವಿವೇಕ, ಸತ್ಯ, ವೈರಾಗ್ಯ ಮುಂತಾದ ಆಂತರಿಕ ಸದ್ಗುಣಗಳನ್ನೇ ಅಲ್ಲಿ ಪೂಜಾಸಾಮಗ್ರಿಗಳೆಂದು ಭಾವಿಸಬೇಕು.

| ಚಂದ್ರಜ್ಞಾನಾಗಮ (9.111)

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net