

ಪರಮೇಶ್ವರಯೋರ್ನಿತ್ಯಂ ಸ್ಮರಣಂ ನಾಮರೂಪಯೋಃ | ಜೀವನ್ಮುಕ್ತಿಪ್ರದಂ ಶೀಲಂ ಪಂಚಾಶತ್ಕಂ ಸಮೀರಿತಮ್ ||
ಸದಾ ಪರಮೇಶ್ವರನ ನಾಮ-ರೂಪಗಳನ್ನು ಸ್ಮರಿಸುವುದು ಜೀವನ್ಮುಕ್ತಿಯನ್ನು ಉಂಟುಮಾಡುವ ಐವತ್ತನೆಯ ಶೀಲ. ಪರಮಾತ್ಮನು ಮೂಲತಃ ನಿರ್ಗಣ ನಿರಾಕಾರನಾಗಿರುವುದರಿಂದ ಅವನಿಗೆ ನಾಮ-ರೂಪಗಳು ಇಲ್ಲದಿದ್ದರೂ, ಎಲ್ಲ ಜೀವಿಗಳಿಗೆ ಅವರವರ ಉಪಾಸನೆಗನುಗುಣವಾಗಿ ದರ್ಶನ ನೀಡಿ ಅವರನ್ನು ಉದ್ಧರಿಸಲು ಅನಂತ ರೂಪ-ನಾಮಗಳನ್ನು ಹೊಂದುತ್ತಾನೆ. ಭಗವಂತನ ಈ ನಾಮ-ರೂಪಗಳೆರಡೂ ಮಂಗಲಪ್ರದಗಳೇ ಆಗಿರುವುದರಿಂದ ತಮಗೆ ಇಷ್ಟವಾದ ನಾಮ-ರೂಪಗಳನ್ನು ಸ್ಮರಿಸಿದಾಗ ನಿಶ್ಚಿತವಾಗಿ ಸನ್ಮಂಗಲಗಳು ಸಿದ್ಧಿಸುತ್ತವೆ.
| ಚಂದ್ರಜ್ಞಾನಾಗಮ (9.108)
| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು