ಶ್ರೀ ಶೈವಾಗಮ; ಅಮೃತ ಬಿಂದು

Sudina-7-Amrutabindu
Published on

ಅಲಬ್ಧವಸ್ತುವಿಷಯವ್ಯಸನಾಬಾವಸುಸ್ಥಿತಿಃ | ಸಂತುಷ್ಟಿಶೀಲಮೇಕೋನಪಂಚಾಶತ್ಕಂ ವಿನಿಶ್ಚಿನು ||

ಇಷ್ಟಪಟ್ಟ ವಿಷಯ-ವಸ್ತುಗಳು ದೊರೆಯದಿದ್ದಾಗ ಅವುಗಳ ಬಗ್ಗೆ ಚಿಂತೆ ಮಾಡದಿರುವ ಉತ್ತಮ ಮನಃಸ್ಥಿತಿಯು ಸಂತುಷ್ಟಿ ಎಂದು ಕರೆಯಲ್ಪಡುವ ನಲವತ್ತೊಂಬತ್ತನೆಯ ಶೀಲ. ನಮ್ಮ ಶ್ರಮ ಮತ್ತು ಪ್ರಾರಬ್ಧಕ್ಕೆ ಅನುಗುಣವಾಗಿ ಏನು ದೊರೆಯುತ್ತದೆಯೋ ಅದರಲ್ಲಿ ಸಂತೋಷಪಡುವ ಮನಃಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ನಮಗಿಂತ ಮೇಲಿರುವವರನ್ನು ನೋಡುತ್ತ ಸಾಧನೆ ಮಾಡಬೇಕು. ನಮಗಿಂತ ಕೆಳಗಿನವರನ್ನು ನೋಡಿ ಸಂತೋಷಪಡಬೇಕು. ಆಗ ಸಾಧನೆ ಮತ್ತು ಸಂತೋಷ ಎರಡನ್ನೂ ತನ್ನದಾಗಿಸಿಕೊಳ್ಳಬಹುದು.

| ಚಂದ್ರಜ್ಞಾನಾಗಮ (9.107) 

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net