ಅಮೃತ ಬಿಂದು

Sudina-7-Amrutabindu
Published on

ಅದೂಷಣಂ ವೈರಿಜನೇಷ್ವಪಕಾರಪರೇಷ್ವಪಿ | ಶೀಲಂ ಕ್ಷಮಾಭಿದಂ ಚತುಶ್ಚತ್ವಾರಿಂಶಂ ಸಮೀರಿತಮ್ ||

ವೈರಿಗಳ ಅಥವಾ ಅಪಕಾರ ಮಾಡಿದವರನ್ನು ದೂಷಿಸದಿರುವುದು ಕ್ಷಮಾ ಎಂದು ಕರೆಯಲ್ಪಡುವ ನಲವತ್ನಾಲ್ಕನೆಯ ಶೀಲ. ಸಾಮಾನ್ಯವಾಗಿ ಇತರರು ತಪ್ಪು ಮಾಡಿದಾಗ ನಾವು ಅವರಿಗೆ ಶಿಕ್ಷೆ ಕೊಡಬೇಕೆಂದು ಪ್ರಯತ್ನಿಸುತ್ತೇವೆ. ಆದರೆ ನಾವೇ ತಪ್ಪು ಮಾಡಿದಾಗ ಅದನ್ನು ಮರೆಮಾಚಲು ಯತ್ನಿಸುತ್ತೇವೆ.

ಇದು ನಿಜವಾದ ಜೀವನಪದ್ಧತಿಯಲ್ಲ. ನಮ್ಮಿಂದ ತಪ್ಪುಗಳಾದಾಗ ಅದಕ್ಕೆ ಶಿಕ್ಷೆ ಅನುಭವಿಸಬೇಕು. ಇತರರು ತಪ್ಪು ಮಾಡಿದಾಗ ಅದನ್ನು ಉದಾರತೆಯಿಂದ ಕ್ಷಮಿಸಬೇಕು. ಆದರೆ ನಾವು ಮಾಡುವ ಕ್ಷಮೆಯು ಅವರು ಮತ್ತೆ ಮತ್ತೆ ತಪ್ಪು ಮಾಡಲು ಅವಕಾಶ ಕಲ್ಪಿಸಿದಂತೆ ಆಗಬಾರದೆನ್ನುವ ಎಚ್ಚರಿಕೆಯೂ ಅಗತ್ಯ.

| ಚಂದ್ರಜ್ಞಾನಾಗಮ (9.102) 

ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net