

ಆಗಮೇ ನಿಗಮೇ ಚೈವ ವಿಶ್ವಾಸೋ ಯದ್ಗುರೂತ್ತಮೇ | ಶ್ರದ್ಧಾಖ್ಯಂ ಶೀಲಮೇತದ್ ದ್ವಿಚತ್ವಾರಿಂಶಂ ಸಮೀರಿತಂ ||
ಆಗಮಗಳು, ವೇದಗಳು ಮತ್ತು ಉತ್ತಮ ಗುರುವಿನ ಮೇಲೆ ಅನನ್ಯ ವಿಶ್ವಾಸ ಇರಿಸುವುದು ಶ್ರದ್ಧೆ ಎಂದು ಕರೆಯಲ್ಪಡುವ ನಲವತ್ತೆರಡನೆಯ ಶೀಲ. ಶಿವನ ನಿಶ್ವಾಸದಿಂದ ವೇದಗಳು ಜನಿಸಿದರೆ, ಅವನ ವೈಖರೀ ವಾಣಿಯಿಂದ ಆಗಮಗಳು ಪ್ರಕಟವಾಗಿವೆ. ಆದ್ದರಿಂದ ಇವು ಸ್ವತಃ ಪ್ರಮಾಣಗಳು ಮತ್ತು ಸದ್ಗುರುವು ಇವನ್ನು ಆಳವಾಗಿ ಅಧ್ಯಯನ ಮಾಡುವುದರ ಜತೆಗೆ ತನ್ನ ಅನುಭವವನ್ನು ಬಳಸಿಕೊಂಡು ಸರ್ವರಿಗೂ ಮಾರ್ಗದರ್ಶನ ಮಾಡುವುದರಿಂದ ಇವರ ಮೇಲೆ ಶ್ರದ್ಧೆಯಿರಿಸಿ ನಡೆದವರಿಗೆ ನಿಶ್ಚಿತವಾಗಿ ಸದ್ಗತಿ ಲಭಿಸುತ್ತದೆ.
ಚಂದ್ರಜ್ಞಾನಾಗಮ / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು