ಅಮೃತ ಬಿಂದು- ಶ್ರೀ ಶೈವಾಗಮ: ಐವತ್ತೊಂದನೆಯ ಶೀಲದ ಬಗ್ಗೆ ಅರಿಯಿರಿ..

srishaila jagadguru
Published on

ಶಂಭುನಾಮಗುಣಾದೀನಾಂ ಚಿಂತನಂ ಯದಾನಾರತಂ | ಶೀಲಂ ಪಾಶಹರಂ ತ್ವೇಕಪಂಚಾಶತ್ಕಂ ಪ್ರಕೀರ್ತಿತಮ್ ||

ಶಿವನ ಹೆಸರು ಮತ್ತು ಶ್ರೇಷ್ಠ ಗುಣಗಳನ್ನು ಎಡೆಬಿಡದೆ ಚಿಂತಿಸುವುದು ಸಂಸಾರಬಂಧನವನ್ನು ಪರಿಹರಿಸುವ ಐವತ್ತೊಂದನೆಯ ಶೀಲ. ಶಿವನಲ್ಲಿ ಸರ್ವಜ್ಞತ್ವ ಮೊದಲಾದ ಶ್ರೇಷ್ಠ ಶಕ್ತಿಗಳು ನಿಹಿತವಾಗಿದ್ದರೂ ಅವುಗಳನ್ನು ಸದಾ ಲೋಕಕಲ್ಯಾಣಕ್ಕಾಗಿಯೇ ಉಪಯೋಗಿಸುತ್ತಾನೆ. ಎಲ್ಲ ವೈಭೋಗಗಳನ್ನು ಪಡೆದುಕೊಳ್ಳುವ ಸಾಮರ್ಥ್ಯ ಇದ್ದರೂ ವೈರಾಗ್ಯಪೂರ್ಣನಾಗಿರುತ್ತಾನೆ. ತನ್ನನ್ನೇ ನಂಬಿ ಶರಣಾಗತರಾದವರನ್ನು ಕೈಹಿಡಿದು ಕಾಪಾಡುತ್ತಾನೆ. ಶಿವನ ಇಂಥ ಲೋಕೋತ್ತರ ಗುಣಗಳನ್ನು ಚಿಂತಿಸಿದಾಗ ನಮ್ಮಲ್ಲೂ ಆ ಗುಣಗಳು ಅಂಶರೂಪದಲ್ಲಾದರೂ ಆಗಮಿಸುತ್ತವೆ.

| ಚಂದ್ರಜ್ಞಾನಾಗಮ (9.109) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net