ಅಮೃತಬಿಂದು: ಶ್ರೀ ಶೈವಾಗಮ: ಯಾವ ಜೀವಾತ್ಮನು ಶಿವನೊಂದಿಗೆ ಪ್ರಗಾಢವಾಗಿ ತಲ್ಲೀನನಾಗುತ್ತಾನೋ ಅವನಿಗೆ ಮತ್ತು ಶಿವನಿಗೆ ಭೇದ ಉಳಿಯುವುದಿಲ್ಲ

Sudina-7-Amrutabindu
Published on

ನಂತರೂಪಂ ದೇವಸ್ಯ ಭಾವಯನ್ನಿಜರೂಪತಃ | ಶಿವಾನಂದವಶಾತ್ ವಿಶ್ವಂ ಆತ್ಮಾನಂ ವಿಸ್ಮರನ್ನಪಿ ||

ಯಸ್ತಿಷ್ಠತ್ಯಚಲಃ ಶೀಲಂ ಚತುಃಷಷ್ಟಿಕಮೀರಿತಮ್ || ದೇವರ ಅನಂತ ರೂಪಗಳನ್ನೆಲ್ಲ ತನ್ನ ರೂಪವೆಂದು ಭಾವಿಸಿ ಶಿವನಿಗೂ

ತನಗೂ ಭೇದವೆಣಿಸದೆ ಶಿವಾನಂದವನ್ನು ಅನುಭವಿಸುವುದರಲ್ಲಿ ತಲ್ಲೀನನಾಗಿ ತನ್ನನ್ನೇ ಮೈಮರೆತು ಶಿವಾದ್ವೈತ ಸ್ಥಿತಿಯಲ್ಲಿ ನಿಶ್ಚಲವಾಗಿ ನಿಲ್ಲುವುದು ಅರವತ್ನಾಲ್ಕನೆಯ ಶೀಲ. ಜೀವನದ ಪ್ರತಿ ಸಾಧನೆಯಲ್ಲೂ ತಲ್ಲೀನತೆಯ ಪಾತ್ರ ಅತಿ ಮುಖ್ಯ. ಯಾರೊಂದಿಗೆ ಮತ್ತು ಯಾವುದರೊಂದಿಗೆ ನಾವು ಆತ್ಯಂತಿಕವಾಗಿ ತಲ್ಲೀನರಾಗುತ್ತೇವೋ ಅಲ್ಲಿ ಉಂಟಾಗುವ ಎಲ್ಲ ಬದಲಾವಣೆಗಳು ನಮ್ಮಲ್ಲಿಯೇ ಉಂಟಾಗುವಂತೆ ಭಾಸವಾಗುತ್ತವೆ. ಅದರಂತೆ ಯಾವ ಜೀವಾತ್ಮನು ಶಿವನೊಂದಿಗೆ ಪ್ರಗಾಢವಾಗಿ ತಲ್ಲೀನನಾಗುತ್ತಾನೋ ಅವನಿಗೆ ಮತ್ತು ಶಿವನಿಗೆ ಭೇದ ಉಳಿಯುವುದಿಲ್ಲ.

| ಚಂದ್ರಜ್ಞಾನಾಗಮ (9.122) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net