ಅಮೃತಬಿಂದು ಶ್ರೀ ಶೈವಾಗಮ: ಯಾವುದೇ ರೂಪವಿಲ್ಲದೆ ಸಂಪೂರ್ಣ ಜಗತ್ತನ್ನು ವ್ಯಾಪಿಸಿ ಆಕಾಶಕ್ಕೂ ಅವಕಾಶವನ್ನು ನೀಡಿದ ನಿರ್ಗಣ ನಿರಾಕಾರ ರೂಪವೇ ನಿಷ್ಕಲ

Sudina-7-Amrutabindu
Published on

ಅಪರಿಚ್ಛಿನ್ನರೂಪಾನುಸಂಧಾನಂ ಯನ್ಮಹೇಶಿತುಃ | ಶೀಲಮುಕ್ತಂ ಸುರಾಚಾರ್ಯ ತ್ರಿಷಷ್ಟಿಕಮುದಾಹೃತಮ್ ||

ಮಹೇಶ್ವರನಾದ ಶಿವನ ಅಖಂಡವೂ ನಿರಾಕಾರವೂ ಆದ ರೂಪವನ್ನು ಅನುಸಂಧಾನ ಮಾಡುವುದು ಅರವತ್ಮೂರನೆಯ ಶೀಲ. ಶಿವನಿಗೆ ಸಕಲರೂಪ, ಸಕಲ ನಿಷ್ಕಲೋಭಯರೂಪ, ನಿಷ್ಕಲರೂಪ ಎಂಬ ಮೂರು ರೂಪಗಳುಂಟು. ಶಿರದಲ್ಲಿ ಚಂದ್ರ ಮತ್ತು ಗಂಗಾ, ಹಣೆಯಲ್ಲಿ ವಿಭೂತಿ, ಕೊರಳಲ್ಲಿ ಸರ್ಪ, ಕೈಯಲ್ಲಿ ಕಪಾಲ-ತ್ರಿಶೂಲ ಮುಂತಾದವುಗಳನ್ನು ಧರಿಸಿರುವ ಶಿವನ ರೂಪವು ಸಕಲ. ಸಾಕಾರ ಮತ್ತು ನಿರಾಕಾರಗಳ ಸಂಕೇತವಾದ ಇಷ್ಟಲಿಂಗವು ಸಕಲ ನಿಷ್ಕಲೋಭಯರೂಪ. ಯಾವುದೇ ರೂಪವಿಲ್ಲದೆ ಸಂಪೂರ್ಣ ಜಗತ್ತನ್ನು ವ್ಯಾಪಿಸಿ ಆಕಾಶಕ್ಕೂ ಅವಕಾಶವನ್ನು ನೀಡಿದ ನಿರ್ಗಣ ನಿರಾಕಾರ ರೂಪವೇ ನಿಷ್ಕಲ. ಸಾಧನೆ ತೀವ್ರವಾದಾಗ ಈ ರೂಪದ ಅನುಸಂಧಾನ ಸಾಧ್ಯ.

| ಚಂದ್ರಜ್ಞಾನಾಗಮ (9.121) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net