ಅಮೃತ ಬಿಂದು- ಶ್ರೀ ಶೈವಾಗಮ: ‘ಧಿ’ ಎಂದರೆ ಬುದ್ಧಿ. ಬುದ್ಧಿಯ ಸಮಸ್ಥಿತಿ ಯಾವುದು ಹಾಗಾದರೆ?!

SHRISHAILA SHREE
Published on

ನಿವಾತದೀಪವತ್ ಧ್ಯಾನೇ ಚೇತಸೋ ಯದವಸ್ಥಿತಿಃ | ಸಮಾಧ್ಯಾಖ್ಯಂ ಶೀಲಮೇಕಷಷ್ಟಿಕಂ ಸಂಪ್ರಚೋದಿತಮ್ ||

ತೀಕ್ಷ್ಣ ಗಾಳಿಯಿಲ್ಲದ ಸ್ಥಳದಲ್ಲಿ ಸ್ಥಿರವಾಗಿ ನಿಲ್ಲುವ ದೀಪದಂತೆ ಕಿಂಚಿತ್ತೂ ಚಂಚಲವಿಲ್ಲದೆ ಧ್ಯಾನದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುವುದು ಸಮಾಧಿ ಎಂದು ಕರೆಯಲ್ಪಡುವ ಅರವತ್ತೊಂದನೆಯ ಶೀಲ. ‘ಸಮಾ’ ಎಂದರೆ ಸಮಸ್ಥಿತಿ. ‘ಧಿ’ ಎಂದರೆ ಬುದ್ಧಿ. ಬುದ್ಧಿಯ ಸಮಸ್ಥಿತಿಯೇ ಸಮಾಧಿ. ಗಾಳಿಯು ದೀಪದ ದಿಕ್ಕು ತಪ್ಪಿಸುವಂತೆ ನಮ್ಮ ಮನಸ್ಸಿನಲ್ಲಿ ಒಂದಾದ ಮೇಲೆ ಒಂದರಂತೆ ಏಳುವ ವಿಚಾರಗಳು ಧ್ಯಾನದ ದಿಕ್ಕು ತಪ್ಪಿಸುತ್ತವೆ. ವಿಚಾರಗಳನ್ನೆಲ್ಲ ಕಳಚಿಕೊಂಡು ಅತ್ಯಧಿಕ, ಅಥವಾ ತಾನು ಸಂಕಲ್ಪಿಸಿದ ಸಮಯದವರೆಗೆ ಮನಸ್ಸನ್ನು ನಿರ್ವಿಚಾರ ಅಥವಾ ದೈವೀಭಾವದಲ್ಲಿ ಸ್ಥಿರವಾಗಿರಿಸುವುದು ಸಮಾಧಿ ಎಂದು ಕರೆಯಲ್ಪಡುತ್ತದೆ.

| ಚಂದ್ರಜ್ಞಾನಾಗಮ (9.119) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net