

ಶ್ರೀ ಶೈವಾಗಮ
ಸಂಧ್ಯಾದ್ವಯಮುಪಾಸೀತ ಸಾವಿತ್ರೀ ಮೂಲಮಂತ್ರಗಂ | ಕರ್ತವ್ಯಾಃ ಪಂಚಯಜ್ಞಾಶ್ಚ ಗೃಹಿಣಾ ಸ್ವಹಿತೈಷಿಣಾ ||
ಪ್ರಾತಃಸಂಧ್ಯೆ, ಸಾಯಂಸಂಧ್ಯೆ ಎಂಬ ಎರಡೂ ಸಂಧ್ಯಾ ಸಮಯದಲ್ಲಿ ಸಾವಿತ್ರೀ (ತತ್ಸವಿತುರ್ವರೇಣ್ಯಂ) ಮತ್ತು ಪಂಚಾಕ್ಷರಮಾತ್ರದಿಂದ ಶಿವೋಪಾಸನೆ ಮಾಡಬೇಕು. ಆತ್ಮಕಲ್ಯಾಣ ಬಯಸುವ ಪ್ರತಿಯೊಬ್ಬ ಗೃಹಸ್ಥರೂ ಪಂಚಯಜ್ಞಗಳನ್ನು ಮಾಡಬೇಕು. ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯಯಜ್ಞ, ಬ್ರಹ್ಮಯಜ್ಞ ಎಂಬ ಐದು ಬಗೆಯ ಯಜ್ಞಗಳು ಕರ್ಮಸಿದ್ಧಾಂತದಲ್ಲಿ ಪ್ರಸಿದ್ಧ. ಆದರೆ ವೀರಶೈವರಿಗೆ ಶಿವಾನುಗ್ರಹದ ಉದ್ದೇಶದಿಂದ ಮಾಡುವ ತಪಸ್ಸು, ಕರ್ಮ, ಜಪ, ಧ್ಯಾನ, ಜ್ಞಾನ ಎಂಬ ಪಂಚಯಜ್ಞಗಳನ್ನು ತಿಳಿಸಲಾಗಿದೆ. ಇಲ್ಲಿ ಇವುಗಳನ್ನೇ ಗ್ರಹಿಸಬೇಕು.
| ಚಂದ್ರಜ್ಞಾನಾಗಮ (11.61) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು