

ಶ್ರೀ ಶೈವಾಗಮ
ರಿಪೌ ನಿಜ ಸುತೇ ವಾಪಿ ಯದ್ವೈ ಷಮ್ಯವಿವರ್ಜನಂ | ಆರ್ಜವಾಖ್ಯಂ ಶೀಲಮೇಕಚತ್ವಾರಿಂಶಮುದಾಹೃತಮ್ ||
ವೈರಿಯಲ್ಲಿ ಮತ್ತು ತನ್ನ ಮಗನಲ್ಲಿ ಯಾವುದೇ ವ್ಯತ್ಯಾಸ ತಾಳದೆ ಮಗನು ಎಷ್ಟೇ ತಪ್ಪುಗಳನ್ನು ಮಾಡಿದರೂ ಅವುಗಳನ್ನು ಮರೆತು ಅವನ ಹಿತವನ್ನೇ ಬಯಸುವಂತೆ ವೈರಿಯ ತಪ್ಪನ್ನೂ ಕ್ಷಮಿಸಿ ತನ್ನ ಸರಳತೆಯ ಮೂಲಕವೇ ಅವನನ್ನು ಗೆಲ್ಲಲು ಯತ್ನಿಸುವುದು ಆರ್ಜವ ಎಂದು ಕರೆಯಲ್ಪಡುವ ನಲವತ್ತೊಂದನೆಯ ಶೀಲ. ವೈರಿಗಳನ್ನು ನಮ್ಮ ಶಕ್ತಿಯಿಂದ ಸೋಲಿಸಿದರೂ ಅವರಲ್ಲಿರುವ ವೈರತ್ವ ಮನೋಭಾವ ಮಾತ್ರ ಸೋಲದು. ಸಮಯಕ್ಕಾಗಿ ಕಾಯುತ್ತಿರುತ್ತದೆ. ಒಂದುವೇಳೆ ವೈರಿಗಳನ್ನು ಪ್ರೀತಿಯಿಂದ ಗೆದ್ದರೆ ಅವರಲ್ಲಿರುವ ವೈರತ್ವ ಮನೋಭಾವವೇ ಅಳಿದುಹೋಗುತ್ತದೆ. ಆದ್ದರಿಂದ ವೈರಿಗಳನ್ನು ಪ್ರೀತಿಯಿಂದ ಗೆಲ್ಲುವುದೇ ಮೊದಲ ಆದ್ಯತೆಯಾಗಬೇಕು.
| ಚಂದ್ರಜ್ಞಾನಾಗಮ (9.99) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು