ಅಮೃತಬಿಂದು; ಮಧ್ಯಾಹ್ನದಲ್ಲಿ ಸ್ನಾನಾದಿಗಳು ಸಾಧ್ಯವಾಗದಿದ್ದರೆ ಕೈಕಾಲು ಮುಖ ತೊಳೆದು ಇಷ್ಟಲಿಂಗಕ್ಕೆ ನಮಸ್ಕರಿಸಿ

Sudina-7-Amrutabindu
Published on

ಶ್ರೀ ಶೈವಾಗಮ

ಅರ್ಥಸಿದ್ಧೈಚ ಕುರ್ವೀತ ಯತ್ನಂ ಭಾಗೇ ತೃತೀಯಕೇ | ಚತುರ್ಥೇ ಚ ತಥಾ ಭಾಗೇ ಮಧ್ಯಾಹ್ನಸ್ನಾನಮಾಚರೇತ್ ||

ಭಸ್ಮಸ್ನಾನಂ ವಿಧಾಯಾಥ ತ್ರಿಪುಂಡ್ರಾನಿ ಯಥಾವಿಧಿ | ಯಥಾಸ್ಥಾನಂ ಚ ರುದ್ರಾಕ್ಷಾನ್ ಧೃತ್ವಾ ಚ ತದನಂತರಂ ||

ದಿನದ ಮೂರನೇ ಭಾಗ ಅಂದರೆ ಅಂದಾಜು ಬೆಳಗಿನ 11ರ ನಂತರ ಹಣಸಂಪಾದನೆಗಾಗಿ ಆಯ್ಕೆ ಮಾಡಿಕೊಂಡಿರುವ ಕೃಷಿ, ಉದ್ಯೋಗ, ವ್ಯಾಪಾರ ಇತ್ಯಾದಿ ಕಾರ್ಯಗಳನ್ನು ಮಾಡಬೇಕು. ದಿನದ ನಾಲ್ಕನೇ ಭಾಗ ಅಂದರೆ ಮಧ್ಯಾಹ್ನ ಎರಡನೆಯ ಸ್ನಾನ ಮಾಡಿ ವಿಧ್ಯುಕ್ತವಾಗಿ ಯಥಾಶಕ್ತಿ ಉಪಲಬ್ಧ ಸಮಯಕ್ಕನುಸಾರ ಭಸ್ಮಸ್ನಾನ, ತ್ರಿಪುಂಡ್ರಧಾರಣೆ ಶಾಸ್ತ್ರವಿಧಿಗೆ ಅನುಸಾರ ರುದ್ರಾಕ್ಷಧಾರಣೆ ಮಾಡಬೇಕು. ಒಂದುವೇಳೆ ಮಧ್ಯಾಹ್ನದಲ್ಲಿ ಸ್ನಾನಾದಿಗಳು ಸಾಧ್ಯವಾಗದಿದ್ದರೆ ಕೈಕಾಲು ಮುಖ ತೊಳೆದು, ವಿಭೂತಿ ಧರಿಸಿ ಇಷ್ಟಲಿಂಗಕ್ಕೆ ನಮಸ್ಕರಿಸಿ ವಿಧಿಯನ್ನು ಪೂರ್ಣಗೊಳಿಸಬಹುದು.

| ಚಂದ್ರಜ್ಞಾನಾಗಮ (11.59-60) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net