

ಶಿವಾನ್ಯವಸ್ತುವಿಷಯಸಂಕಲ್ಪಪರಿವರ್ಜನಂ | ಶೀಲಂ ದಮಾಭಿದಂ ಸಪ್ತಚತ್ವಾರಿಂಶಂ ಸಮೀರಿತಮ್ ||
ಶಿವನನ್ನು ಹೊರತುಪಡಿಸಿ ಇತರ ವಸ್ತು ಮತ್ತು ವಿಷಯಗಳ ವಿಷಯಕವಾದ ಸಂಕಲ್ಪಗಳನ್ನು ಪರಿತ್ಯಾಗ ಮಾಡುವುದು ದಮ ಎಂದು ಕರೆಯಲ್ಪಡುವ ನಲವತ್ತೇಳನೆಯ ಶೀಲ. ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃ ತಸ್ಮಾತ್ ಪರಾಂಙ್ ಪಶ್ಯತಿ ನಾಂತರಾತ್ಮನ್ ಎಂಬ ಉಪನಿಷತ್ ಉಕ್ತಿಯಂತೆ ಇಂದ್ರಿಯಗಳು ಬಹಿಮುಖವಾಗಿ ಹರಿಯುವುದರಿಂದ ಅಂತರಂಗವನ್ನು ನೋಡುವುದಿಲ್ಲ. ಹೀಗೆ ಸ್ವಭಾವತಃ ಬಹಿಮುಖವಾದ ಇಂದ್ರಿಯಗಳನ್ನು ಸಾಧನೆಯ ಬಲದಿಂದ ನಿಯಂತ್ರಿಸಿ ಅಂತರಂಗದಲ್ಲಿ ಆರೂಢಿಸಿದ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಅಂತಮುಖಗೊಳಿಸುವ ಪ್ರಕ್ರಿಯೆಗೆ ದಮ ಎನ್ನುತ್ತಾರೆ.
| ಚಂದ್ರಜ್ಞಾನಾಗಮ (9.105 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು